Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಬೊಳ್ಳಿ ಕಡಬ ದಿನೇಶ್ ರೈಯವರ ಕಲಾಯಾನದ ರಜತ ಸಂಭ್ರಮದ ಪ್ರಯುಕ್ತ ‘ಬೊಳ್ಳಿ ಪರ್ಬ – 25’ | ಜನವರಿ 22
    Felicitation

    ಯಕ್ಷಬೊಳ್ಳಿ ಕಡಬ ದಿನೇಶ್ ರೈಯವರ ಕಲಾಯಾನದ ರಜತ ಸಂಭ್ರಮದ ಪ್ರಯುಕ್ತ ‘ಬೊಳ್ಳಿ ಪರ್ಬ – 25’ | ಜನವರಿ 22

    January 15, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಡಬ : ಕಡಬ ತಾಲೂಕು, ಐತ್ತೂರು ಗ್ರಾಮದ, ಬೆತ್ತೋಡಿ – ಮಾಳ ವರದ ರೈ ಮತ್ತು ವಾರಿಜ ರೈ ದಂಪತಿಗಳ ಮಗನಾಗಿ ಜನನ. 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಿಲ್ಲಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುಗಳಾದ ಶ್ರೀ ತಾರನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯಾಭ್ಯಾಸ ಮಾಡಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡರು. ನಂತರ ಶ್ರೀ ಕಟೀಲು ಮೇಳ, ಪುತ್ತೂರು ಮೇಳ, ಕುಂಟಾರು ಮೇಳ, ಮಂಗಳಾದೇವಿ ಮೇಳ, ತೆಂಕು – ಬಡಗು ಸಮ್ಮಿಶ್ರಗೊಂಡ ಹಿರಿಯಡ್ಕ ಮೇಳ, ತಳಕಲ ಮೇಳ, ಸುಂಕದಕಟ್ಟೆ ಮೇಳ, ಬಾಚಕೆರೆ ಮೇಳ, ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ. ರವಿ ಕುಮಾರ್ ಸುರತ್ಕಲ್ ರಚಿಸಿದ ‘ನಾಗತಂಬಿಲ’ದ ಕೂಸಮ್ಮ (ನಂಜುಂಡ)ನ ಪಾತ್ರ ಯಕ್ಷ ರಂಗದಲ್ಲಿ ಹೊಸ ತಿರುವು ತಂದು ಕೊಟ್ಟಿತ್ತು. ನಾಗರಪಂಚಮಿಯ ನೋಣಯ್ಯ, ‘ವಜ್ರ ಕುಟುಂಬ’ದ ಕಪಟ ಸ್ವಾಮೀಜಿ, ‘ಪವಿತ್ರ – ಪಲ್ಲವಿ’ಯ ಪದ್ಮಾವತಿ (ಪದ್ದು), ‘ಚೆನ್ನಿ- ಚೆನ್ನಮ್ಮ’ದ ಪುರುಷೋತ್ತಮ, ‘ವಿಜಯಕೇಸರಿ’ಯ ಮಾರುತಿ, ‘ಜೀವನಚಕ್ರ’ದ ನಿಷ್ಠಾವಂತ ಸೇವಕ, ‘ಗುಳಿಗೋದ್ಭವ – ಪಂಜುರ್ಲಿ ಪ್ರತಾಪ’ದ ಗೋಪಾಲ ಹಾಗೂ ಚಂದ್ರ ಮನಸೂರೆಗೊಂಡ ಪಾತ್ರಗಳು. ತೆಂಕು-ಬಡಗಿನಲ್ಲಿ, ತುಳು – ಕನ್ನಡದಲ್ಲಿ, ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪ್ರಸಂಗವಾದರೂ ತನಗೆ ಸಿಕ್ಕಿದ ಪಾತ್ರಗಳ ಅಧ್ಯಯನ ಮಾಡಿ ಹಿರಿಯ, ಕಿರಿಯ ಕಲಾವಿದರಿಂದ ಕೇಳಿ ತಿಳಿದು, ಕಥೆಗೆ ಲೋಪ ಬಾರದಂತೆ ತನ್ನದೇ ಶೈಲಿಯ ಹಾಸ್ಯದಲ್ಲಿ ಜನರನ್ನು ರಂಜಿಸುತ್ತಾರೆ.

    ‘ವಿಜಯ ಕಲಾವಿದರು ಕಿನ್ನಿಗೋಳಿ’ ತಂಡದ ‘ಲೈಫ್ ಕೊರ್ಪರ’ ತುಳು ನಾಟಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ನಾಟಕ ಪರ್ಬದಲ್ಲಿ ಪ್ರಶಾಂತ್ ಸಿ.ಕೆ. ನಿರ್ದೇಶನದ, ಬೇರೆ ಬೇರೆ ರಂಗಗಳಿಂದ ಆಯ್ದ ದಿಗ್ಗಜರೊಂದಿಗೆ ‘ಸತ್ಯೊದ ಬಿರುವೆರ್’ ನಾಟಕದಲ್ಲಿ ಪಯ್ಯಬೈದ್ಯನಾಗಿ ಅಭಿನಯಿಸಿದ್ದಾರೆ. ಚಂದನ ವಾಹಿನಿಯಲ್ಲಿ ಪ್ರಸಾರವಾದ ‘ಪಾಪೋದ ಪಿರವು’ ಮತ್ತು ‘ಸಜ್ಜಿಗೆ ಬಜಿಲ್’ ತುಳು ಧಾರಾವಾಹಿ, ರಾಧ ಸುರಭಿ ಕಂಬೈನ್ಸ್ ರವರ ನವೀನ್ ಮಾರ್ಲ ಕೊಡಂಗೆ ನಿರ್ದೇಶನದ ‘ವಿಕ್ರಾಂತ್’ ತುಳು ಸಿನಿಮಾ, ಅಲ್ಲದೆ ನಮ್ಮ ಟಿವಿ ವಾಹಿನಿಯ ‘ಬಲೇ ತೆಲಿಪಾಲೆ’ ಕಾಮಿಡಿ ಶೋ, ದೈಜಿವರ್ಲ್ಡ್ ವಾಹಿನಿಯ ‘ಯಕ್ಷ ರಸ’, ನಮ್ಮ ಕುಡ್ಲ ವಾಹಿನಿಯ ‘ಯಕ್ಷ ತೆಲಿಕೆ’ ಹೀಗೆ ತಮಗೆ ಸಿಕ್ಕ ಅವಕಾಶಗಳಲ್ಲಿ ಪ್ರಾಮಾಣಿಕ ಪ್ರಯತ್ನದ ಮೂಲಕ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ‘ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಇರುವೈಲು’ ಇವರು ಯಕ್ಷ ಬೊಳ್ಳಿ ಎಂಬ ಬಿರುದಿನೊಂದಿಗೆ ಗೌರವಿಸಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ‘ಯಕ್ಷ ರಕ್ಷಾ -2017 ಪ್ರಶಸ್ತಿ’, ಬೆಂಗಳೂರಿನ ಯುವ ಬಂಟರ ಸಂಭ್ರಮದಲ್ಲಿ ‘ಬಂಟ್ಸ್ ಯಂಗ್ ಅಚಿವರ್ಸ್ -2018’ ಪ್ರಶಸ್ತಿ , ಶ್ರವಣಬೆಳಗೊಳದಲ್ಲಿ ನಡೆದ 12ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಯುವ ರತ್ನ’ ಪ್ರಶಸ್ತಿ ಅಲ್ಲದೆ ಕರ್ನಾಟಕ, ಕೇರಳ, ಮುಂಬೈ, ಪೂನಾ, ಮಸ್ಕತ್, ಕತಾರ್, ದುಬೈ ಹೀಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿರುತ್ತಾರೆ.

    ತುಳು ಭಾಷೆ, ತುಳುಲಿಪಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ‘ನಮ್ಮ ತುಳುನಾಡು ಟ್ರಸ್ಟ್ (ರಿ) ಕುಡ್ಲ’ ಇದರ ಕಾರ್ಯಧ್ಯಕ್ಷರಾಗಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿರುವಾಗ ಯಕ್ಷಗಾನ ಕಲಿಯುತ್ತಿರುವ ತಂಡದವರಲ್ಲಿ ತುಳುಭಾಷೆ ಮತ್ತು ತುಳು ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಿಸಲು ಪೌರಾಣಿಕ ಪ್ರಸಂಗವನ್ನು ತುಳು ಭಾಷೆಯಲ್ಲಿ ಪ್ರದರ್ಶನ ಮಾಡುವುದಕ್ಕೊಂದು ‘ತುಳು ಯಕ್ಷ ಜಾತ್ರೆ’, ಹಳ್ಳಿಯಲ್ಲಿರುವ ನಾಟಕ ತಂಡಗಳನ್ನ ಒಟ್ಟು ಸೇರಿಸಿ ‘ತುಳು ನಾಟಕ ಪರ್ಬ’ ಅಲ್ಲದೆ ತುಳು ತಾಳಮದ್ದಳೆ, ತುಳುವ ಐಸಿರಿ ಹೀಗೆ ತುಳು ಭಾಷೆಯನ್ನು ಬೆಳೆಸುವುದಕೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸೇವೆ ಸಲ್ಲಿಸಿರುತ್ತಾರೆ. ತನ್ನಲ್ಲಿ ನಗಲಾರದಷ್ಟು ನೋವಿದ್ದರೂ ಕಲಾ ಸೇವೆಯಲ್ಲಿ ಅದನ್ನೆಲ್ಲ ಮರೆತು 25 ವರ್ಷಗಳಿಂದ ಕಲಾವಿದರಾಗಿ ದುಡಿಯುತ್ತಿದ್ದಾರೆ.

    ಯಕ್ಷಬೊಳ್ಳಿ ಕಡಬ ದಿನೇಶ್ ರೈಯವರ ಕಲಾಯಾನದ ರಜತ ಸಂಭ್ರಮದ ಪ್ರಯುಕ್ತ ‘ಬೊಳ್ಳಿ ಪರ್ಬ – 25’ ಎಂಬ ಕಾರ್ಯಕ್ರಮವೊಂದನ್ನು ದಿನಾಂಕ 22 ಜನವರಿ 2025ರಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸಂಯೋಜಿಸಿಲಾಗಿದೆ. ಮಧ್ಯಾಹ್ನ 2-00 ಗಂಟೆಗೆ ದಿ. ಬಂಟ್ವಾಳ ಜಯರಾಮ ಆಚಾರ್ಯ ವೇದಿಕೆಯಲ್ಲಿ ‘ಬೊಳ್ಳಿ ಪರ್ಬ – 25’ ಯಕ್ಷಬೊಳ್ಳಿ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಮದ್ಯಾಹ್ನ 3-00 ಗಂಟೆಗೆ ಜಿಲ್ಲೆಯ ಸುಪ್ರಸಿದ್ಧ ಹಿಮ್ಮೇಳ – ಮುಮ್ಮೆಳ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ಹಾಸ್ಯ ವೈಭವ’, ದಿ. ಸಾಂತಪ್ಪ ಕಡಬ ವೇದಿಕೆಯಲ್ಲಿ 5-30 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಗುರುವಂದನೆ – ಗೌರವಾರ್ಪಣೆ – ಸನ್ಮಾನ ಮತ್ತು ರಾತ್ರಿ 7-30 ಗಂಟೆಗೆ ದಿ. ರಸಿಕರತ್ನ ನಯನ್ ಕುಮಾರ್ ವೇದಿಕೆಯಲ್ಲಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

    felicitation yakshagana
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ‘ಚಿಣ್ಣರ ಬಣ್ಣದ ಹಬ್ಬ – 2025’
    Next Article ಕುಂದಾಪುರ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ | ಜನವರಿ 18
    roovari

    Add Comment Cancel Reply


    Related Posts

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026

    ಮಂಗಳೂರು ವಿ.ವಿ.ಯ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರಕಟ

    February 26, 2026

    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’

    February 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.