ಮೈಸೂರು : ಕದಂಬ ರಂಗವೇದಿಕೆ (ರಿ.) ಮೈಸೂರು ಇವರ ವತಿಯಿಂದ ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಿನಾಂಕ 20 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಲಾ ಮಂದಿರ ಪಕ್ಕದಲ್ಲಿರುವ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಗಣೇಶ ಅಮೀನಗಡ ಇವರ ‘ಬಂಗಾರದ ಮನುಷ್ಯ’ ನಾಟಕ ಕೃತಿ ಬಿಡುಗಡೆ ಮತ್ತು ‘ಕೌದಿ’ ಏಕವ್ಯಕ್ತಿ ನಾಟಕದ 50ನೇ ಪ್ರದರ್ಶನ ನಡೆಯಲಿದೆ.
ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಇವರು ಕೃತಿ ಬಿಡುಗಡೆ ಮಾಡಲಿದ್ದು, ಲೇಖಕಿ ಡಾ. ಗಿರಿಜಾಪತಿ ಎನ್.ಎಂ. ಇವರು ಕೃತಿ ಪರಿಚಯ ಮಾಡಲಿದ್ದಾರೆ. ಗಣೇಶ ಅಮೀನಗಡ ಇವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕದಂಬ ರಂಗವೇದಿಕೆಯ ಅಧ್ಯಕ್ಷರಾದ ರಾಜಶೇಖರ ಕದಂಬ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

