ಉಡುಪಿ : ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಉಡುಪಿ ಮತ್ತು ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜ್ಯೂಕೇಶನಲ್ ಟ್ರಸ್ಟ್ (ರಿ) ಉಡುಪಿ ಇವುಗಳ ಸಹಯೋಗದಲ್ಲಿ ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಇದರ ರಜತಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ‘ಗ್ರಂಥ ಲೋಕಾರ್ಪಣ ಸಮಾರಂಭ’ವು ದಿನಾಂಕ 12-05-2024ರಂದು ಉಡುಪಿಯ ಕುಂಜಿಬೆಟ್ಟು ಇಲ್ಲಿರುವ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿಯ ಆರ್.ವಿ.ಎಸ್. ಸಂಘದ ಅಧ್ಯಕ್ಷರಾದ ಶ್ರೀ ವೇಕಟೇಶ ಆಚಾರ್ಯ ಇವರು ವಹಿಸಲಿದ್ದು, ಉಡುಪಿಯ ಅಲೆವೂರು ಪ್ರಭಾಕರ ಆಚಾರ್ಯ ಸ್ಮಾರಕ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ ರಾವ್ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಹಚಿಂತನದ ಪ್ರಕಾಶಕರಾದ ಶ್ರೀ ಎಸ್. ವಿ. ಆಚಾರ್ಯ ಇವರು ಕೃತಿ ಲೋಕಾರ್ಪಣ ಮಾಡಲಿದ್ದು, ಅಧ್ಯಾಪಕರಾದ ಶ್ರೀ ರಮೇಶ್ ವಿ. ಆಚಾರ್ಯ ಮತ್ತು ವಿಶ್ವಕರ್ಮ ಎಜ್ಯೂಕೇಶನಲ್ ಟ್ರಸ್ಟಿನ ಅಧ್ಯಕ್ಷರಾದ ಇಂ.ಬಿ.ಎ. ಆಚಾರ್ಯ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ.