ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ.) ದೇಲಂಪಾಡಿ ಇವುಗಳ ಆಶ್ರಯದಲ್ಲಿ ‘ಕೃತಿಗಳ ಅನಾವರಣ’ವು ದಿನಾಂಕ 19-05-2024 ಆದಿತ್ಯವಾರ ಅಪರಾಹ್ನ ಗಂಟೆ 2.00ರಿಂದ ಶ್ರೀ ಎಡನೀರು ಕ್ಷೇತ್ರದ ಭಾರತೀಸದನ ಸಭಾಂಗಣ ನಡೆಯಲಿದೆ.
ಅಪರಾಹ್ನ ಗಂಟೆ 2.00ರಿಂದ ಡಾ. ಬನಾರಿಯವರ ‘ಕಾವ್ಯವಾಚನ ಮತ್ತು ಗಾಯನ’ ಕವಿಗಳು ಮತ್ತು ಗಾಯಕರಿಂದ ಹಾಗೂ ‘ಕರ್ನಾಟಕದೊಂದಿಗೆ ಕಾಸರಗೋಡಿನ ವಿಲೀನೀಕರಣ’ ಎಂಬ ವಿಷಯದ ಬಗ್ಗೆ ಸಂವಾದ ಗೋಷ್ಠಿ ನಡೆಯಲಿದೆ. ಮಾಧ್ಯಮತಜ್ಞರು ಹಾಗೂ ಕಲಾವಿದರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಸಂವಾದ ಗೋಷ್ಠಿ ನಡೆಸಿಕೊಡಲಿದ್ದು, ಡಾ. ರಮಾನಂದ ಬನಾರಿ, ಡಾ. ವಸಂತಕುಮಾರ ಪೆರ್ಲ, ಶ್ರೀ ಟಿ.ಎ.ಎನ್. ಖಂಡಿಗೆ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಇವರುಗಳು ಸಹಭಾಗಿಗಳಾಗುವರು.
ಅಪರಾಹ್ನ ಗಂಟೆ 3.30ರಿಂದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಇವರ ಆಶೀರ್ವಚನದೊಂದಿಗೆ ಕೃತಿಗಳ ಲೋಕಾರ್ಪಣೆ ನೆರವೇರಲಿದ್ದು, ಮೈಸೂರಿನ ಖ್ಯಾತ ಸಂಶೋಧಕರು, ಅಷ್ಟಾವಧಾನಿಗಳಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ರಮಾನಂದ ಬನಾರಿ ಮತ್ತು ಶ್ರೀ ಗಣರಾಜ ಕುಂಬ್ಳೆ ಇವರ ‘ತಾಳಮದ್ದಳೆ ಒಂದು ಐತಿಹಾಸಿಕ ಅಧ್ಯಯನ’ ಮತ್ತು ಲೇಖಕರಾದ ಡಾ. ಎಂ. ಪ್ರಭಾಕರ ಜೋಷಿ, ಡಾ. ಪ್ರಮೀಳಾ ಮಾಧವ, ಡಾ. ವಸಂತಕುಮಾರ ಪೆರ್ಲ, ಡಾ. ಮುರಳಿ ಮೋಹನ ಚೂಂತಾರು, ಶ್ರೀ ವೆಂಕಟರಾಮ ಭಟ್ಟ ಸುಳ್ಯ, ಶ್ರೀ ಟಿ.ಎ.ಎನ್. ಖಂಡಿಗೆ, ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಇವರ ‘ಚಿಕಿತ್ಸಕ ದೃಷ್ಟಿಯ ಸಂಸ್ಕೃತಿಯ ಸೂತ್ರಧಾರಿ ಡಾ. ರಮಾನಂದ ಬನಾರಿ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಮತ್ತು ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇವರ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.