ಬೆಂಗಳೂರು : ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮ ಇವುಗಳ ಸಹಯೋಗದಲ್ಲಿ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 02 ಮಾರ್ಚ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ನರಸಿಂಹರಾಜು ಕಾಲೋನಿಯು 3ನೇ ಮುಖ್ಯ ರಸ್ತೆಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಲೇಖಕ ಶ್ರೀ ಎಚ್. ದುಂಡಿರಾಜ್ ಇವರ ‘ಹದಿನಾಲ್ಕು ಕಿರು ಹಾಸ್ಯ ನಾಟಕಗಳು’, ಶ್ರೀ ರಘುನಾಥ ಚ.ಹ. ಇವರ ‘ಇಳಿಸಲಾಗದ ಶಿಲುಬೆ’ ಮತ್ತು ‘ಇಲ್ಲಿಂದ ಮುಂದೆಲ್ಲ ಕಥೆ’ ಹಾಗೂ ಶ್ರೀಮತಿ ಪಾರ್ವತಿ ಜಿ. ಐತಾಳ್ ಇವರ ‘ಅಂತರಂಗದ ಸ್ವಗತ’ ಎಂಬ ಕೃತಿಗಳು ಈ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಪ್ರಸಿದ್ಧ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಇವರು ಕೃತಿ ಬಿಡುಗಡೆ ಮಾಡಲಿದ್ದು, ಪ್ರಸಿದ್ಧ ಲೇಖಕರಾದ ಎಚ್.ಎಸ್. ಸತ್ಯ ನಾರಾಯಣ ಮತ್ತು ಪ್ರಸಿದ್ಧ ಬರಹಗಾರರಾದ ಡಾ. ರವಿಕುಮಾರ್ ನೀಹ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.