ಬೆಂಗಳೂರು : ಆಕೃತಿ ಪುಸ್ತಕ ಮತ್ತು ಜೀರುಂಡೆ ಪುಸ್ತಕ ಇವರ ಸಹಯೋಗದಲ್ಲಿ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಇವರು ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ, ಎಚ್.ಎಸ್. ಶ್ರೀಮತಿ ಇವರ ‘ಸ್ತ್ರೀವಾದೀ ಸಾಹಿತ್ಯ ವಿಮರ್ಶೆ’ ಹಾಗೂ ಕೆ.ವಿ. ನಾರಾಯಣ ಇವರ ‘ಹೊಸ ಓದುಗರಿಗೆ ಕುವೆಂಪು’ ಮತ್ತು ‘ಕನ್ನಡ ನುಡಿ ರಚನೆ – ಕೆಲವು ನೆಲೆಗಳು’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಪುಸ್ತಕ ಪರಿಚಯವನ್ನು ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ, ನಾಟಕಕಾರರಾದ ಕೆ.ವೈ. ನಾರಾಯಣಸ್ವಾಮಿ ಮತ್ತು ಪ್ರಾಧ್ಯಾಪಕರಾದ ಶಶಿಕಲಾ ಎಚ್. ಇವರು ಮಾಡಲಿದ್ದಾರೆ.