ಬೆಂಗಳೂರು : ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ ಸಪ್ನ ಬುಕ್ ಹೌಸ್ ಹಾಗೂ ಎನ್. ನರಸಿಂಹಯ್ಯ ಶತಮಾನೋತ್ಸವ ಸಂಭ್ರಮ ಸಮಿತಿ ಇದರ ವತಿಯಿಂದ ಎನ್. ನರಸಿಂಹಯ್ಯನವರ 10 ಕಾದಂಬರಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 06 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಗಾಂಧಿನಗರದಲ್ಲಿ ‘ಸಪ್ನ ಬುಕ್ ಹೌಸ್’ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರು ವಹಿಸಲಿದ್ದು, ಡಾ. ಬೈರಮಂಗಲ ರಾಮೇಗೌಡ, ರಾ.ನಂ. ಚಂದ್ರಶೇಖರ, ಡಾ. ಉದ್ದಂಡಯ್ಯ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.