ಮಂಗಳೂರು : ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಸುಳ್ಯ ಗುತ್ತಿಗಾರು ಬಂಟಮಲೆ ಅಕಾಡೆಮಿ ವತಿಯಿಂದ ‘ಕಲ್ಲೆ ಶಿವೋತ್ತಮ ರಾವ್ ಜನಪ್ರಗತಿಯ ಪಂಜು’ ಕೃತಿ ಬಿಡುಗಡೆ ಮತ್ತು ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09-03-2024 ಶನಿವಾರ ನಗರದ ಸಹೋದಯ ಸಭಾಂಗಣದಲ್ಲಿ ಜರಗಿತು.
ಪುಸ್ತಕ ಬಿಡುಗಡೆ ಮಾಡಿದ ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ “ಕಲ್ಲೆ ಶಿವೋತ್ತಮ ರಾವ್ ಅವರು ಪತ್ರಕರ್ತನಾಗಿ 70 ರ ದಶಕದ ಎಲ್ಲ ಕ್ರಾಂತಿಕಾರಕ ಬದಲಾವಣೆಗಳನ್ನು ಬೆಂಬಲಿಸಿದ್ದರು. ಕ್ರಾಂತಿಕಾರಕ ಮಾನವತಾವಾದಿಯಾಗಿದ್ದರು” ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಮಾತನಾಡಿ “ದೇಶದ ಪ್ರಗತಿಗೆ ಸಾಹಿತಿ, ಪತ್ರಕರ್ತರ ಕೊಡುಗೆ ದೊಡ್ಡದು. ಕಲ್ಲೆ ಶಿವೋತ್ತಮ ರಾವ್ ತುಳಿತಕ್ಕೊಳಗಾದವರಿಗೆ ದನಿಯಾದವರು.” ಎಂದು ಹೇಳಿದರು.
ಕಲ್ಲೆಶಿವೋತ್ತಮರಾವ್ ಅವರ ಪರವಾಗಿ ಅವರ ಪುತ್ರ ಅಜಿತ್ ಅಶುತೋಷ್ ಕಲ್ಲೆ ಮತ್ತು ಪುತ್ರಿ ಅಲಕಾ ಕುಮಾರ್ ಅವರು ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ನಾಟಕಕಾರ ಎ. ಕೆ. ಹಿಮಕರ ಅವರು ಬಂಟಮಲೆ ಅಕಾಡೆಮಿ ಹಾಗೂ ಪ್ರಶಸ್ತಿ ಕುರಿತು ಮಾತನಾಡಿದರು. ಕೃತಿ ಸಂಪಾದಕ ಪಾರ್ವತೀಶ ಬಿಳಿದಾಳೆ ಪ್ರಾಸ್ತಾವಿಸಿದರು.
Subscribe to Updates
Get the latest creative news from FooBar about art, design and business.