ಮೈಸೂರು : ಸಮಾಜವಾದಿ ಅಧ್ಯಯನ ಕೇಂದ್ರ ಟಸ್ಟ್ (ರಿ), ಮೈಸೂರು ಆಯೋಜಿಸುವ ಲೇಖಕ ಪ್ರಸನ್ನ ಇವರ ‘ಆಕ್ಟಿಂಗ್ ಅಂಡ್ ಬಿಯಾಂಡ್’ ಪುಸ್ತಕ ಲೋಕಾರ್ಪಣೆ ಮತ್ತು ಚರ್ಚಾ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರ ಭಾನುವಾರ ಸಂಜೆ ಘಂಟೆ 5.00ಕ್ಕೆ ಮೈಸೂರಿನ ಜೆ. ಎಲ್. ಬಿ. ರಸ್ತೆಯಲ್ಲಿರುವ ಹಾರ್ಡ್ರಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮೈಸೂರಿನ L&T ಟೆಕ್ನಾಲಜಿ ಸರ್ವಿಸಸ್ ಸಂಸ್ಥೆಯ ಡೆಲಿವರಿ ಮುಖ್ಯಸ್ಥ ಹಾಗೂ ಲೇಖಕರಾದ ಶಶಿಧರ ಡೋಂಗ್ರೆ, ಮೈಸೂರಿನ ಲೇಖಕರಾದ ಪ್ರೀತಿ ನಾಗರಾಜ್ ಹಾಗೂ ಲೇಖಕರು ಮತ್ತು ಖ್ಯಾತ ರಂಗ ನಿರ್ದೇಶಕರಾದ ಪ್ರಸನ್ನ ಭಾಗವಹಿಸಲಿದ್ದಾರೆ.