ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ (ಮಾಹೆ) ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವರ ಜಂಟಿ ಆಶ್ರಯದಲ್ಲಿ ಡಾ. ಎನ್. ಟಿ. ಭಟ್ ವಿರಚಿತ ‘ಪಂಪ ಭಾರತ ರೀಟೋಲ್ಡ್ ಆ್ಯಸ್ ಇಂಗ್ಲೀಷ್ ನರೇಟಿವ್’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 06 ಜನವರಿ 2025ರಂದು ಸಂಜೆ ಘಂಟೆ 4.00 ರಿಂದ ಉಡುಪಿಯ ಎಂ. ಜಿ. ಎಂ. ಕಾಲೇಜು ಆವರಣದ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಉಡುಪಿಯ ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿಯ ರಾ. ಗೋ. ಪೈ. ಸಂ. ಕೇಂದ್ರ ಇದರ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಬಿ. ಎ. ವಿವೇಕ ರೈ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ವಿಮರ್ಶಕ ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ರಮೇಶ್ ಭಟ್ ಬೆಳಗೋಡು ಕೃತಿ ಪರಿಚಯ ಮಾಡಲಿದ್ದಾರೆ.

