ಮೈಸೂರು: ರಂಗ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಸಂಸ್ಕೃತಿಕ ಪ್ರಕಾಶನ ಇದರ ಸಂಯುಕ್ತ ಆಶ್ರಯದಲ್ಲಿ ರಂಗ ನಟ ಹಾಗೂ ಲೇಖಕ ಬಿ. ಎಂ. ಮಹಾದೇವ್ ಮೂರ್ತಿ ವಿರಚಿತ ‘ಸವೆದ ಪಯಣ’ ಆತ್ಮಕಥೆ ಮತ್ತು ‘ಬಾಳತೇರು’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು 07 ಜುಲೈ2024ರಂದು ಮೈಸೂರು ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ “ಮೌಡ್ಯತೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ. ಮೌಡ್ಯತೆಯನ್ನು ಬಿಂಬಿಸುವ ಹಬ್ಬಗಳನ್ನು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.” ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಎರಡು ಕೃತಿಗಳ ವಿಶೇಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಸವೆದ ಪಯಣ’ ಆತ್ಮಕಥೆ ಕುರಿತು ಸಾಹಿತಿ ನಾ. ದಿವಾಕರ ಮಾತನಾಡಿದರೆ, ‘ಬಾಳತೇರು’ ಕವನ ಸಂಕಲನ ಕುರಿತು ಪತ್ರಕರ್ತ ಬಿ. ಆರ್. ರಂಗಸ್ವಾಮಿ ಮಾತನಾಡಿದರು. ಸಾಹಿತಿ ಹೊರೆಯಾಲ ದೊರೆಸ್ವಾಮಿ, ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಎಸ್. ಚಿಕ್ಕಸಾವಕ, ಕೃತಿ ಲೇಖಕ ಬಿ. ಎಂ. ಮಹಾದೇವ್ ಮೂರ್ತಿ, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಉಪಸ್ಥಿತರಿದ್ದರು.
ಆಸಕ್ತರು ಪುಸ್ತಕದ ಪ್ರತಿಗಾಗಿ ಬಿ. ಎಂ. ಮಹಾದೇವ್ ಮೂರ್ತಿ- 8095203458 ಇವರನ್ನು ಸಂಪರ್ಕಿಸಬಹುದು.