ಸೋಮವಾರಪೇಟೆ : ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲ್ಲೂಕು, ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಹಿರಿಯ ಸಾಹಿತಿ ಜಲಜಾ ಶೇಖರ್ ಬರೆದಿರುವ ‘ಕನ್ನಡಿಯ ಪ್ರತಿಬಿಂಬ’ ಕವನ ಸಂಕಲನ ಮತ್ತು ‘ದೂರದ ತೀರಯಾನ’ ಪ್ರವಾಸ ಕಥನ ಪುಸ್ತಕಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 26 ಅಕ್ಟೋಬರ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಡಾ. ಬೆಸೂರು ಮೋಹನ್ ಪಾಳೇಗಾರ್ ಮಾತನಾಡಿ “ಕಾವ್ಯ ಜನರ ಹೃದಯವನ್ನು ತಟ್ಟಿದಾಗ ಮಾತ್ರ ಕವಿಯ ಬರವಣಿಗೆ ಸಾರ್ಥಕವಾಗುತ್ತದೆ. ಕೃತಿ ಮತ್ತು ಕಾವ್ಯ ವಿಮರ್ಶೆಯ ಹೆಸರಿನಲ್ಲಿ ವಿಪರೀತ ಟೀಕೆ ಮಾಡಿದರೆ, ಒಬ್ಬ ಸಾಹಿತಿ ಮತ್ತು ಕವಿ, ಸಾಹಿತ್ಯ ಕೃಷಿಯನ್ನೇ ತ್ಯಜಿಸುವ ಸಂಭವಿರುತ್ತದೆ. ಪ್ರತಿಯೊಬ್ಬರು ಅವರ ಭಾಷಾ ಜ್ಞಾನಕ್ಕೆ ಅನುಗುಣವಾಗಿ ಬರೆದಿರುತ್ತಾರೆ. ಅದು ಸಾಮಾನ್ಯ ಓದುಗನಿಗೆ ಅರ್ಥವಾದರೆ ಸಾಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಟಿ. ಪಿ. ರಮೇಶ್ ಮಾತನಾಡಿ ಲೇಖಕನಿಗೆ ಇಡೀ ಸಮಾಜವನ್ನು ಮೆಚ್ಚಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಕಾವ್ಯ ಮತ್ತು ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲು ಬಹಳಷ್ಟು ಕಷ್ಟವಾಗುತ್ತದೆ. ಕಾವ್ಯ ಸೃಷ್ಟಿಗೆ ಸಾವಿಲ್ಲ. ಓದುಗರು ಇಲ್ಲದಿದ್ದರೂ ಸಾಹಿತಿಗಳು ಬರೆಯುವುದನ್ನು ನಿಲ್ಲಿಸುವುದಿಲ್ಲ. ಇದು ಕನ್ನಡ ಸಾಹಿತ್ಯದ ಶಕ್ತಿ” ಎಂದರು.
ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಎಸ್. ಡಿ. ವಿಜೇತ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಎ. ಮುರುಳೀಧರ್, ಅಕ್ಷಯ ಪತ್ತಿನ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾದ ಬೇಬಿ ಚಂದ್ರಹಾಸ್, ಗೀತಾ ರಾಜು, ಜೆ. ಸಿ. ಶೇಖರ್, ಎಚ್. ಜೆ. ಜವರಪ್ಪ, ಜಲಜಾ ಶೇಖರ್, ಆಶಾ ಶುಭಾಕರ್, ಜ್ಯೋತಿ ಅರುಣ್, ಎ. ಪಿ. ವೀರರಾಜು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಕೋಲಾರದ ಪತ್ರಕರ್ತರ ಭವನದಲ್ಲಿ ‘ನುಡಿ ಸಂಭ್ರಮ -2025’ | ನವೆಂಬರ್ 02
