ತುಮಕೂರು : ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕವಿತಾಕೃಷ್ಣ ಸಾಹಿತ್ಯ ಮಂದಿರ ಬಳಗ ತುಮಕೂರು ಇವರುಗಳ ಸಹಯೋಗದಲ್ಲಿ 36 ಕೃತಿಗಳ ಲೋಕಾರ್ಪಣೆ ಮತ್ತು ಕವಿತಾಕೃಷ್ಣ ನುಡಿನಮನ ಕಾರ್ಯಕ್ರಮವು ದಿನಾಂಕ 13-07-2024ರಂದು ಬೆಳಿಗ್ಗೆ 10.30ಕ್ಕೆ ತುಮಕೂರಿನ ಕೌತಮಾರನಹಳ್ಳಿಯ ಆಕಾಶ್ ಫಾರ್ಮ್ ನಲ್ಲಿ ನಡೆಯಲಿದೆ.
ಜಿಲ್ಲಾ ಕ. ಸಾ. ಪ. ಅಧ್ಯಕ್ಷರಾದ ಶ್ರೀ ಕೆ. ಎಸ್. ಸಿದ್ಧಲಿಂಗಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಪತ್ರಿಕೋದ್ಯಮಿಗಳಾದ ಶ್ರೀ ಎಸ್. ನಾಗಣ್ಣ ಉದ್ಘಾಟಿಸಲಿದ್ದು, 36 ಕೃತಿಗಳನ್ನು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಾನಸ ಲೋಕಾರ್ಪಣೆಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕರಾದ ಶ್ರೀಮತಿ ಬಾ. ಹ. ರಮಾಕುಮಾರಿ, ಗಾಂಧೀತತ್ವ ಪ್ರಚಾರಕರಾದ ಶ್ರೀ ಎಂ. ಬಸವಯ್ಯ, ಶ್ರೀಮತಿ ನಾಗರತ್ನಮ್ಮ ಕವಿತಾಕೃಷ್ಣ (ಶ್ರೀ ಕವಿತಾಕೃಷ್ಣರ ಧರ್ಮಪತ್ನಿ) ಸಾಹಿತ್ಯ ಸಂಘಟಕರಾದ ಶ್ರೀ ಟಿ. ಆರ್. ಎಚ್. ಪ್ರಕಾಶ್ ಹಾಗೂ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಇದರ ಪ್ರಕಾಶಕರಾದ ಶ್ರೀ ಕೆಂಪಣ್ಣ ಭಾಗವಹಿಸಲಿದ್ದಾರೆ.

