ಹೊನ್ನಾವರ : ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಪ್ರೀತಿಪದ ಇವರ ವತಿಯಿಂದ ಬಹುರೂಪಿಯ ಪ್ರಕಟಣೆ ಕಿರಣ ಭಟ್ ಇವರ ‘ಹೌಸ್ ಫುಲ್’ ಕೃತಿ ಲೋಕಾರ್ಪಣೆಯನ್ನು ದಿನಾಂಕ 26 ಫೆಬ್ರವರಿ 2025ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಇವರು ವಹಿಸಲಿದ್ದು, ಬರಹಗಾರರಾದ ದೀಪಾ ಹಿರೇಗುತ್ತಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಧಾರವಾಡದ ಸಮಾಜ ವಿಜ್ಞಾನಿಗಳಾದ ಪ್ರಕಾಶ ಭಟ್ ಇವರು ಪುಸ್ತಕದ ಕುರಿತು ಮಾತನಾಡಲಿದ್ದು, ಬಹುರೂಪಿಯ ಜಿ.ಎನ್. ಮೋಹನ್ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.