ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ದಿನದಂದು ದಿನಾಂಕ 21 ಜನವರಿ 2026ರಂದು ಹರಿದಾಸ, ಭಜನಾ ಕೀರ್ತನಕಾರ ಶರತ್ ಶೆಟ್ಟಿ ಪಡುಪಳ್ಳಿ ಇವರ ತುಳು ಬರಹಗಳ ಗುಚ್ಚ ‘ಕಡ್ಲೆ ಬಜಿಲ್’ ಎಂಬ ಪುಸ್ತಕ ಕದ್ರಿ ದೇವಳದ ರಾಜಾಂಗಣದಲ್ಲಿ ಬಿಡುಗಡೆಗೊಂಡಿತು.
ಪುಸ್ತಕಕ್ಕೆ ಮುನ್ನುಡಿ ಬರೆದ ಹಿರಿಯ ಲೇಖಕಿ ರೂಪಕಲಾ ಆಳ್ವ ಮಾತನಾಡಿ “ಕಡ್ಲೆ ಬಜಿಲ್ ಪುಸ್ತಕ ತುಳುವರ ದಿನನಿತ್ಯದ ಕಷ್ಟ ಸುಖ, ಹಬ್ಬ ಹರಿದಿನ, ಊರಿನ ಜಾತ್ರೆ ಸಡಗರ ಮತ್ತು ಹಿಂದೆ ಕಳೆದ ಬಾಲ್ಯದ ಬಗೆಗಿನ ನೆನಪು ಹುಟ್ಟಿಸುವ ಉತ್ತಮ ವಿಚಾರಗಳನ್ನು ಹೊಂದಿದ ಒಂದು ಸಮಗ್ರ ಲೇಖನ ಮಾಲೆ. ಆಸಕ್ತರು ಖರೀದಿಸಿ ಓದಿದರೆ ಹಿಂದಿನ ‘ಕಡ್ಲೆಬಜಿಲ್’ ಸವಿದ ರುಚಿ ನೀಡುವುದು ಗ್ಯಾರಂಟಿ” ಎಂದರು.
ಮಲ್ಲಿಕಾ ಕಲಾವೃಂದ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ ಮಾತನಾಡಿ, “ಈ ಪುಸ್ತಕ ಲೋಕನೀತಿಯ ವಿಚಾರಗಳ ಒಂದು ಗುಚ್ಚ ಎಂದು ಶುಭ ಹಾರೈಸಿದರು. ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಮತ್ತಿತರರು ಉಪಸ್ಥಿತರಿದ್ದರು. ಲೇಖಕ ಶರತ್ ಶೆಟ್ಟಿ ವಂದಿಸಿದರು.

