ಮೂಡಬಿದಿರೆ : ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಗಣೇಶ ಪ್ರಸಾದಜೀ (ಜೀಜೀ) ಇವರ 9ನೆಯ ಕೃತಿ ‘ಕಾಂತೆ ಕವಿತೆ’ಯು ಅವರು ಕಲಿತ ಮೂಡಬಿದಿರೆಯ ನೆಲ್ಲಿಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದಲ್ಲಿ ದಿನಾಂಕ 03 ಮೇ 2025ರಂದು ಅನಾವರಣಗೊಂಡಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಅಜೆಕಾರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿಯವರು ಕೃತಿಯ ಬಗ್ಗೆ ಮಾತನಾಡಿ ಕವಿತೆಗಳನ್ನು ವಿಶ್ಲೇಷಿಸಿ, ಮೆಚ್ಚುಗೆ ಸೂಚಿಸಿ ‘ಈ ಕೃತಿ ಎಲ್ಲರ ಮನೆ ಮನೆಯಲ್ಲಿರಬೇಕು, ಇಂತಹ ಕೃತಿಗಳು ಇನ್ನಷ್ಟು ಬರಬೇಕು’ ಎಂದು ಆಶಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಅಭಿನಂದಿಸಿದರು. ಕೃತಿಕಾರ ಜೀಜೀಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತಿತರ ಅತಿಥಿಗಳು ವೇದಿಕೆಯಲ್ಲಿದ್ದರು. ಜೀ ಜೀಯವರು ವಂದಿಸಿದರು.