ಕೋಟ : ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಆವರಣದ ಕೂಟ ಬಂಧು ಭವನದಲ್ಲಿ ಬರಹಗಾರ್ತಿ ವಾಣಿಶ್ರೀ ಅಶೋಕ್ ಐತಾಳ ಇವರ ನಾಲ್ಕು ಕಥಾಸಂಕಲನಗಳ ಅನಾವರಣ ಕಾರ್ಯಕ್ರಮವು ದಿನಾಂಕ 03 ಆಗಸ್ಟ್ 2025ರಂದು ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಉಪೇಂದ್ರ ಸೋಮಯಾಜಿ ಮಾತನಾಡಿದರು. ‘ನಿನಗಾಗಿ ಹೇಳುವೆ ಕಥೆ ನೂರನು’ ಎಂಬ ಕಥಾಸಂಕಲನವನ್ನು ಹೊನ್ನಾವರದ ಸಹಶಿಕ್ಷಕ ಗಣೇಶ ಹೆಗಡೆ, ‘ಗೆಜ್ಜೆ’ ಕಥಾಸಂಕಲನವನ್ನು ಸುವ್ರತ ಅಡಿಗ, ‘ಹೆಜ್ಜೆ’ ಕಥಾಸಂಕಲನವನ್ನು ಸುಮನ ಹೇರಳೆ ಹಾಗೂ ‘ಹನಿ ಇಬ್ಬನಿ’ ಎಂಬ ಕಥಾ ಸಂಕಲನವನ್ನು ಮಂಜುನಾಥ ಮರವಂತೆ ಪರಿಚಯಿಸಿದರು.
ಡಾ. ಟಿ.ಎಂ.ಎ. ವೈ ಮಹಾ ವಿದ್ಯಾಲಯದ ಸಮನ್ವಯಧಿಕಾರಿಗಳಾದ ಡಾ. ಮಹಾಬಲೇಶ್ವರ ರಾವ್, ಡಯಟ್ ಪ್ರಾಂಶುಪಾಲ ಡಾ. ಅಶೋಕ ಕಾಮತ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿಯವರು ಪುಸ್ತಕ ಅನಾವರಣಗೊಳಿಸಿದರು.
ನಿವೃತ್ತ ಉಪನ್ಯಾಸಕಿ ಪಾರ್ವತಿ ಜಿ. ಐತಾಳ್, ಸಹಶಿಕ್ಷಕ ಸುರೇಶ ಮರಕಾಲ, ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕೋಟ ಸಿ.ಎ. ಬ್ಯಾಂಕ್ ಪ್ರಬಂಧಕ ಅಶೋಕ ಐತಾಳ ಇದ್ದರು. ಇದೇ ವೇಳೆ ಪುಸ್ತಕಗಳ ರಚನೆಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗುರುಗಳಿಗೆ ಹಾಗೂ ಪೋಷಕರಿಗೆ ಗೌರವ ಸಮರ್ಪಣೆಯನ್ನು ನಡೆಸಲಾಯಿತು. ಅರ್ಪಣಾ ಬಾಯಿ ನಿರ್ವಹಿಸಿದರು. ಕಥೆಗಾರ್ತಿ ವಾಣಿಶ್ರೀ ಅಶೋಕ ಐತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರ ಅವನೀಶ ಐತಾಳ್ ಸ್ವಾಗತಿಸಿ, ರಾಜಶ್ರೀ ತಂತ್ರಿ ವಂದನಾರ್ಪಣೆಗೈದರು.