Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಸತ್ಯದರ್ಶನ ನುಡಿಮುತ್ತುಗಳು’ ಮತ್ತು ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ ತಾಯಿತಾತ್’ ಕೃತಿಗಳ ಲೋಕಾರ್ಪಣೆ
    Book Release

    ‘ಸತ್ಯದರ್ಶನ ನುಡಿಮುತ್ತುಗಳು’ ಮತ್ತು ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ ತಾಯಿತಾತ್’ ಕೃತಿಗಳ ಲೋಕಾರ್ಪಣೆ

    January 8, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಲೇಖಕಿ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರು ಬರೆದಿರುವ ‘ಸತ್ಯದರ್ಶನ ನುಡಿಮುತ್ತುಗಳು’ ಮತ್ತು ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ ತಾಯಿತಾತ್’ ಅರೆಭಾಷೆ ಕವನ ಸಂಕಲನದ ಲೋಕಾರ್ಪಣೆಯು ಕನ್ನಡ ಸಾಹಿತ್ಯ ಪರಿಷತ್‌ ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ದಿನಾಂಕ 31-12-2023ರಂದು ಬೆಳಿಗ್ಗೆ ದರ್ಬೆ ಬೈಪಾಸ್‌ ರಸ್ತೆಯ ಮಕ್ಕಳ ಮಂಟಪದಲ್ಲಿ ನಡೆಯಿತು.

    ಪುಸ್ತಕ ಲೋಕಾರ್ಪಣೆ ಮಾಡಿದ ದರ್ಬೆ ಮಕ್ಕಳ ಮಂಟಪದ ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ ಅವರು ಮಾತನಾಡಿ, “ಲೇಖಕಿ ಸುಲೋಚನಾ ಅವರು ಬರೆದಿರುವ ಪುಸ್ತಕವನ್ನು ಓದಿ ಮಂಥನ ಮಾಡಿಕೊಳ್ಳಬೇಕು. ಅವರು ಬರೆದಿರುವ ಪುಸ್ತಕದ ಬಗ್ಗೆ ಏನಾದರೂ ವಿಚಾರಗಳು ಅಥವಾ ಪ್ರತಿಕ್ರಿಯೆಗಳಿದ್ದರೆ ಅವರನ್ನು ಸಂಪರ್ಕಿಸಬಹುದು. ಸುಲೋಚನಾ ಅವರ ಬರವಣಿಗೆಯು ನಿರಂತರವಾಗಿ ಮುಂದುವರಿಯಲಿ” ಎಂದರು.

    ಕಾರ್ಯಕ್ರಮ ಉದ್ಘಾಟಸಿದ ತಹಶೀಲ್ದಾರ್ ಜೆ. ಶಿವಶಂಕರ್ ಅವರು ಮಾತನಾಡಿ, “ನಮ್ಮ ಇಲಾಖೆಯಲ್ಲಿ ಉಪ ತಹಶೀಲ್ದಾರ್ ಆಗಿದ್ದುಕೊಂಡು ಸುಲೋಚನಾ ಅವರು ಪುಸ್ತಕ ಬರೆದಿರುವುದು ಸಂತೋಷ ತಂದಿದೆ. ಈ ಪ್ರಸ್ತಕವನ್ನು ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಂಡು ಅದರಲ್ಲಿರುವ ವಿಚಾರಗಳನ್ನು ತಿಳಿದುಕೊಳ್ಳಬೇಕು” ಎಂದರು.

    ಕೃತಿಗಳ ಲೇಖಕಿ ಸುಲೋಚನಾ ಪಿ.ಕೆ. ಇವರು ಮಾತನಾಡಿ “ನಾನು ಸ್ವಚಿಂತನೆಯೊಂದಿಗೆ ಬೆಳೆದವಳು. ಪ್ರೌಢಶಾಲೆಯಲ್ಲಿ ಕವನ ಬರೆದಿದ್ದೇನೆ. ಕಾಲೇಜು ಹಂತದಲ್ಲಿ ಸಾಹಿತ್ಯದ ರುಚಿ ತಿಳಿದವಳು. ಹೇಳಿಕೊಳ್ಳಲಾಗದ ನನ್ನೊಳಗಿನ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲು ಶ್ರಮಪಟ್ಟಿದ್ದೇನೆ. ಧೈರ್ಯವಿಲ್ಲದೆ ಕಾಲಾವಕಾಶ ಪಡೆದುಕೊಂಡಿದೆ. ನನ್ನ ಗುರು ನೀಡಿದ ಜ್ಞಾನದಲ್ಲಿ ನನ್ನ ಮನಸ್ಸಿನ ಭಾವನೆಗಳನ್ನು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. ಜ್ಞಾನ ಬೇರೆ, ಪುಸ್ತಕ ಬೇರೆ. ಜನರ ಭಾವನೆಗಳು ವಿಭಿನ್ನವಾಗಿರುತ್ತದೆ. ನಾನು ನನ್ನದೇ ಭಾವನೆಯಲ್ಲಿ ಪುಸ್ತಕ ಬರೆದಿದ್ದೇನೆ. ಇದನ್ನು ಯಾರು ಬೇಕಾದರೂ ಓದಬಹುದು. ವಿಮರ್ಷೆಗೆ ನಾನು ಭಾಗವಹಿಸುವುದಿಲ್ಲ. ಅಮ್ಮನ ಮಾತು ನನ್ನ ಮನಸ್ಸಿನಲ್ಲಿ ದೃಢವಾಗಿದ್ದು ಅದು ಜೀವನದಲ್ಲಿ ಬದಲಾವಣೆಗೆ ದಾರಿಯಾಗಿ, ಶಕ್ತಿ ತುಂಬಿದೆ. ಅಮ್ಮನಿಂದ ನನಗೆ ಸತ್ಯದರ್ಶನವಾಗಿದೆ. ಅವರಿಂದ ನನ್ನ ವ್ಯಕ್ತಿತ್ವ ರೂಪಿಸಿದೆ. ನುಡಿಮುತ್ತು ಪುಸ್ತಕದಲ್ಲಿ ಸಮಾಜದಿಂದ ಸಂಗ್ರಹಿಸಿದ 1500 ನುಡಿಮುತ್ತುಗಳಿವೆ” ಎಂದು ಹೇಳಿದರು.

    ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಅವರು ಮಾತನಾಡಿ, “ಲೇಖನದ ಮೂಲಕ ಸಮಾಜ, ವ್ಯಕ್ತಿತ್ವ ಬದಲಾಯಿಸಬಹುದು. ಸಾಹಿತ್ಯಗಳು ಬೆಳೆದರೆ ಸಮಾಜದ ಅಭಿವೃದ್ಧಿಯಾಗಲಿದೆ. ವ್ಯಂಗ್ಯ ಸಾಹಿತಿಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸುಲೋಚನಾರವರು ಕಂದಾಯ ಇಲಾಖೆಯ ಪ್ರತಿನಿಧಿಯಾಗಿ ಸರಕಾರಿ ನೌಕರರ ಸಂಘಕ್ಕೆ ಬಂದ ಬಳಿಕ ನಮ್ಮ ಸಂಘವು ಸಾಹಿತ್ಯ ಸಂಘವಾಗುತ್ತಿದೆ. ಸಂಘದಲ್ಲಿ ಸಾಹಿತ್ಯ ಬದ್ಧವಾಗಿ ಚರ್ಚೆಗಳಾಗುತ್ತಿವೆ” ಎಂದರು.

    ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಶಿಕ್ಷಣ ಚಿಂತಕ ಗೋಪಾಡ್ಕರ್ ರವರು ಮಾತನಾಡಿ, “ಪ್ರೌಢಶಾಲಾ ವಿದ್ಯಾರ್ಥಿ ಜೀವನದಲ್ಲಿ ಸುಲೋಚನಾರವರು ಮೌನವಾಗಿದ್ದರು. ಅವರ ಮೌನದಲ್ಲಿ ಸಾಕಷ್ಟು ವಿಚಾರಗಳಿತ್ತು. ಅವರ ಮೌನ ಈಗ ಸ್ಫೋಟವಾಗಿದೆ. ಅಮ್ಮನ ಆದರ್ಶದಲ್ಲಿ ಪುಸ್ತಕವನ್ನು ಬಹಳ ದೀರ್ಘವಾಗಿ ಬರೆದಿದ್ದಾರೆ. ಸುಲೋಚನಾರವರು ಸಹಿ ಹಾಕುವುದಕ್ಕೆ ಹುಟ್ಟಿದವರಲ್ಲ” ಎಂದರು.

    ಸಾಹಿತಿ, ನ್ಯಾಯವಾದಿ ಯಾಗಿರುವ ವಿದ್ಯಾಧರ್ ಕುಡೆಕಲ್ ಮಡಿಕೇರಿ ಮಾತನಾಡಿ “ಕರ್ನಾಟಕವು ಇತರ ರಾಜ್ಯಗಳಿಗಿಂತ ಭಿನ್ನ, ವಿವಿಧ ಭಾಷಾ ಅಕಾಡೆಮಿಗಳ ಮುಖಾಂತರ ಭಾಷೆಯನ್ನು ರಕ್ಷಿಸುವ ಕಾರ್ಯವಾಗುತ್ತಿದೆ. ಆದರೂ ಓಟ್‌ ಬ್ಯಾಂಕ್ ರಾಜಕೀಯದಲ್ಲಿ ಕೆಲವೊಂದು ಭಾಷೆಗಳು ಗೊತ್ತಾಗುವುದಿಲ್ಲ. ನಿರ್ಲಕ್ಷ ಸಮುದಾಯದ ಕೊಂಡಿ ಮುಂದುವರಿದ ಭಾಗವಾಗಿ ಸುಲೋಚನಾ ಅವರು ಪುಸ್ತಕ ಬರೆದಿದ್ದಾರೆ. ಸೈನಿಕನ ಪುತ್ರಿಯಾಗಿ ಪುಸ್ತಕ ಬರೆದಿರುವ ಸುಲೋಚನಾರವರು ಸತ್ಯ ದರ್ಶನದಲ್ಲಿ ಅಮ್ಮನ ಮಾತನ್ನೇ ದಾರಿದೀಪವಾಗಿ ಪುಸ್ತಕ ಬರೆದಿದ್ದಾರೆ. ಗಾದೆಯ ತುಣುಕುಗಳಿವೆ. ತಾಯಿಯ ಮಾತು ಹಿತವಚನವಾಗಿರುವುದು ಹಾಗೂ ತನ್ನಲ್ಲಿ ಬೀರಿರುವ ಪ್ರಭಾವವನ್ನು ಪುಸ್ತಕದಲ್ಲಿ ತೋರಿದ್ದಾರೆ” ಎಂದರು.

    ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಭೀಮರಾವ್‌ ವಾಸ್ಟರ್ ಮಾತನಾಡಿ, “ಸಾಹಿತಿ ಸುಲೋಚನಾರವರ ಎರಡೂ ಪುಸ್ತಕಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿರುವ ಒಳಾರ್ಥ ತಿಳಿದುಕೊಳ್ಳಬೇಕು. ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಿರುವ ಪುಸ್ತಕ ಯುವ ಸಾಹಿತಿಗಳಿಗೆ ವೇದಿಕೆಯಾಗಲಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಉಮೇಶ್ ನಾಯಕ್‌ ಅವರು ಮಾತನಾಡಿ, ಬಾಲ್ಯದಲ್ಲಿ ದೊರೆತ ಅಮ್ಮನ ಹಿತ ನುಡಿಗಳನ್ನು ಕೃತಿಗಳ ಮೂಲಕ ಪರಿಚಯಿಸಿರುವ ಸುಲೋಚನಾರವರು ಕನ್ನಡ ಸಾಹಿತ್ಯ ಪರಿಷತ್‌ಗೆ ಹೊಸ ಮುಖದ ಪರಿಚಯವಾಗಿದೆ. ಫೇಸ್‌ಬುಕ್‌ನಲ್ಲಿ ಬರೆಯುವವರೂ ಸಾಹಿತ್ಯದ ಬಗ್ಗೆ ಅಭಿರುಚಿ ಇರುವವರಾಗಿದ್ದು ಮುಂದೆ ಅವರು ಉತ್ತಮ ಸಾಹಿತಿಗಳಾಗಿ ಬರಬಹುದು ಎಂದ ಅವರು ನಾನು ಬರೆದದ್ದೇ ಉತ್ಕೃಷ್ಟವಾದುದು ಎಂಬ ಭ್ರಮೆ ಸಾಹಿತಿಗಳಲ್ಲಿರಬಾರದು” ಎಂದರು.

    ರ೦ಗ ಬೆಳಕು ತಂಡದವರಿಂದ ರಂಗಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಂಗ ಬೆಳಕು ತಂಡದವರಿಂದ ರಂಗ ಗೀತೆಗಳ ಗಾಯನ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರು ಹಾಗೂ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದ ಕವಿಗಳಿಗೆ ತುಳುನಾಡಿನಲ್ಲಿ ಅಡುಗೆ ಮನೆಯಲ್ಲಿ ಉಪಯೋಗಿಸುವ ಪುರಾತನವಾದ ಕುಡ್ಪು ಅನ್ನು ವಿನೂತನ ಸ್ಮರಣಿಕೆಯಾಗಿ ನೀಡಿರುವುದು ವಿಶೇಷ ಆಕರ್ಷಣೆಯಾಗಿತ್ತು.

    ಸಭಾ ಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಎಚ್. ಭೀಮರಾವ್‌ ವಾಸ್ಟರ್ ಸುಳ್ಯ ವಹಿಸಿದ್ದರು. ಕವಿಗಳಾದ ಸುಪ್ರೀತಾ ಚರಣ್ ಪಾಲಪ್ಪೆ, ಕವಿತಾ ಸತೀಶ್, ದಿವ್ಯ ಮಯ್ಯ, ರಶ್ಮಿತಾ ಸುರೇಶ್ ಜೋಗಿ ಬೆಟ್ಟು, ಪ್ರಿಯಾ ಸುಳ್ಯ, ರಮ್ಯ ಚೇತನ್ ವಿಟ್ಲ, ಚೇತನ್ ಕೆ. ವಿಟ್ಲ, ಹರ್ಷಿತ ಹರೀಶ್ ಕುಲಾಲ್ ಐರ್ವನಾಡು, ಸೌಜನ್ಯ ಬಿ.ಎಂ. ಕಯ್ಯೂರು, ನಾರಾಯಣ ನಾಯ್ಕ ಕುದುಕೋಳಿ, ನವ್ಯ ಶ್ರೀ ಸ್ವರ್ಗ, ಪೂರ್ಣಿಮಾ ಗಿರೀಶ್ ಕತ್ತಿಮುಂಡ, ಜೆಸ್ಸಿ ಪಿ.ವಿ. ಶಾಹಿನಾ ಎನ್. ಬೆಳ್ಳಾರೆ, ಉಮಾಪ್ರಸಾದ್ ರೈ ನಡುಬೈಲು, ಸಂಗೀತ ಕೂಡ್ಲು, ಪೂರ್ಣಿಮಾ ಕುದ್ಮಾರ್, ನಳಿನಿ ಡಿ. ಪಂಜಳ, ಪ್ರಮೀಳಾ ರಾಜ್, ಪೂರ್ಣಿಮಾ ಪೆರ್ಲಂಪಾಡಿ, ವಿಜಯ ಕುಮಾರ್ ಕಾಣಿಚ್ಚಾರ್ ಹಾಗೂ ಅನನ್ಯ ಎಚ್. ಸುಬ್ರಹ್ಮಣ್ಯ ಕವಿಗೋಷ್ಠಿಯಲ್ಲಿ ಭಾಗವಹಿದ್ದರು.

    ಈ ಕೃತಿಗಳ ಬೆಲೆ ರೂ.100/- ಆಗಿದ್ದು, ಕೃತಿಗಳಿಗಾಗಿ ಸುಲೋಚನಾ ಪಿ.ಕೆ. 8762715999 ಇವರನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ನಂದಿಕೇಶ್ವರ ಗೆಳೆಯರ ಬಳಗದ 12ನೇ ವರ್ಷದ ಯಕ್ಷಸಂಭ್ರಮ
    Next Article ಕೃಷ್ಣ ಮಂದಿರದಲ್ಲಿ ಸಾಧನ ಬಳಗದ ‘ಸ್ನೇಹ ಮಿಲನ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.