ಧಾರವಾಡ : ಬಹುರೂಪಿ ಹಾಗೂ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಧಾರವಾಡ ಇದರ ವತಿಯಿಂದ ಮಲಯಾಳಂ ಖ್ಯಾತ ಲೇಖಕಿ ಕೆ.ಆರ್. ಮೀರಾ ಇವರ ವಿಶಿಷ್ಟ ಕೃತಿಯನ್ನು ವಿಕ್ರಂ ಕಾಂತಿಕೆರೆ ಇವರು ಕನ್ನಡಕ್ಕೆ ಅನುವಾದ ಮಾಡಿರುವ ‘ಭಗವಂತನ ಸಾವು’ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 09 ನವೆಂಬರ್ 2024ರಂದು ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂವೇದನಾಶ್ರೀಲ ನಟರಾದ ಪ್ರಕಾಶ್ ರೈ ಇವರು ಕೃತಿ ಬಿಡುಗಡೆ ಮಾಡಲಿದ್ದು, ಲೇಖಕಿ ಕೆ.ಆರ್. ಮೀರಾ, ವಿಕ್ರಂ ಕಾಂತಿಕೆರೆ, ಶ್ರೀವಿಜಯ ಕಲಬುರ್ಗಿ ಮತ್ತು ಚಿಂತಕರಾದ ಸಿದ್ದನಗೌಡ ಪಾಟೀಲ ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು.