ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಇದರ ವತಿಯಿಂದ ಶ್ರೀ ಎಡನೀರು ಕ್ಷೇತ್ರದ ಭಾರತೀ ಕಲಾ ಸದನದ ಸಭಾ ಮಂದಿರದಲ್ಲಿ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 15 ಮಾರ್ಚ್ 2025ರಂದು ಮಧ್ಯಾಹ್ನ 2-00 ಘಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಪ್ರೊ. ತಾಳ್ತಜೆ ವಸಂತ ಕುಮಾರ ಇವರು ವಹಿಸಲಿದ್ದು, ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ಇವರನ್ನು ಅಭಿನಂದಿಸಲಾಗುವುದು. ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ ಇವರ ಸಂಪಾದಿತ ಕೃತಿಗಳಾದ ‘ಕನ್ನಡಿಯಲ್ಲಿ ಕನ್ನಡಿಗ ಸಂಪುಟ 1 ಮತ್ತು 2’ ಲೋಕಾರ್ಪಣೆಗೊಳ್ಳಲಿದ್ದು, ಕತೆಗಾರರು, ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಆಗಮ ಪೆರ್ಲ ಇವರ ಕರ್ನಾಟಕ ಶಾಸ್ತ್ರೀಯ ಭಕ್ತಿ ಸಂಗೀತಕ್ಕೆ ಗೌತಮ ಭಟ್ ಪಿ.ಜಿ. ವಯಲಿನ್ ಹಾಗೂ ಆಶ್ಲೇಷ್ ಪಿ. ಮೃದಂಗದಲ್ಲಿ ಸಹಕರಿಸಲಿದ್ದಾರೆ.