ಬೆಂಗಳೂರು : ರಾಮ್ಕಿ ಮಾಚೇನಹಳ್ಳಿ ಸಾರಥ್ಯದಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ಅಪ್ಪ ಅವ್ವ ಅಕ್ಷರ ಪಬ್ಲಿಕೇಷನ್ಸ್ ಇವರ ವತಿಯಿಂದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 06 ಏಪ್ರಿಲ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬುಡಕಟ್ಟಿನ ಕನ್ನಡತಿ ಡಾ. ಬಿ.ಟಿ. ಲಲಿತಾ ನಾಯಕ್ ಅಭಿನಂದನಾ ಗ್ರಂಥ, ಸಾಹಿತ್ಯ-ಸಂಸ್ಕೃತಿ ಅನುಸಂಧಾನ, ನೆಲೆ ಬೆಲೆ – ಕಾದಂಬರಿ, ಹಬ್ಬ ಮತ್ತು ಬಲಿ – ಕಥಾ ಸಂಕಲನ, ಬಿ.ಟಿ. ಲಲಿತಾ ನಾಯಕ್ ರವರ ಸಮಗ್ರ ಕವಿತೆಗಳು – ಕವನ ಸಂಕಲನ, ಗತಿ – ಕಾದಂಬರಿ, GATI – English, RAFTAR – Hindi, ವಿದ್ಯಾರ್ಥಿಗಳೇ ಪರೀಕ್ಷೆಯನ್ನು ನಗುತ್ತಾ ಎದುರಿಸಿ, ಅನುಪಮ ಸಾಧಕರು, ಕೃಷಿ ಋಷಿಗಳು, ಸಾವಯವ ಕೃಷಿ, ಮರೆಯಲಾಗದವರು ಭಾಗ -1, ಸೋತು ಗೆದ್ದವರು ಭಾಗ -1, ಅತಿರಥರು ಭಾಗ -1 ಮುಂತಾದ ಕೃತಿಗಳು ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿವೆ.