ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಮತ್ತು ಮಿತ್ರ ಮಂಡಳಿ ಕೋಟ ಇದರ ಆಶ್ರಯದಲ್ಲಿ ಏಳು ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 3-30 ಗಂಟೆಗೆ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಕಾರಂತ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಇವರ ಘನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು ಮತ್ತು ಹಿರಿಯ ವಕೀಲರಾದ ಎ.ಎಸ್.ಎನ್. ಹೆಬ್ಬಾರ್ ಇವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದು, ಶಿಕ್ಷಕರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಮಂಜುನಾಥ ಉಪಾಧ್ಯ, ಸಾಂಸ್ಕೃತಿಕ ಸಂಪನ್ಮೂಲರು ಸುಬ್ರಹ್ಮಣ್ಯ ಶೆಟ್ಟಿ, ಉಪನ್ಯಾಸಕರಾದ ಜಿ. ಸಂಜೀವ, ಸಾಹಿತಿ ಶ್ರೀಮತಿ ಪೂರ್ಣಿಮಾ ಕಮಲಶಿಲೆ ಇವರುಗಳು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ನೀಲಾವರ ಸುರೇಂದ್ರ ಅಡಿಗ ಇವರ ‘ನೀಲೇಂದ್ರ ವಾಣಿ’ ಮತ್ತು ‘ಕೋಟ ಹದಿನಾಲ್ಕು ಗ್ರಾಮಗಳು’, ನರೇಂದ್ರ ಕುಮಾರ್ ಕೋಟ ಇವರ ‘ಸಮಗ್ರ ಗದ್ಯ ಬರೆಹ ಭಾಗ -1’, ಸುವೃತ ಅಡಿಗ ಇವರ ‘ಬಿಲ್ಲಿ ಮತ್ತು ಗೆಳೆಯರು’ ಮತ್ತು ‘ಕನಸುಗಳಿಗೆ ಅರ್ಥ ಹುಡುಕುತ್ತ’, ಸೃಜನ ಸೂರ್ಯ ಇವರ ‘ದುಂಡುಮಲ್ಲಿಗೆ ಮುಖದವಳು’ ಹಾಗೂ ಉಪೇಂದ್ರ ಸೋಮಯಾಜಿ ಇವರ ‘ಮೆಚ್ಚಿ ಬರೆವ ಪುಳಕ’ ಕೃತಿಗಳು ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿವೆ.