ಮಂಜೇಶ್ವರ : ಹೊಸಪೇಟೆಯ ‘ಯಾಜಿ ಪ್ರಕಾಶನ’ ಮತ್ತು ಕಾಸರಗೋಡು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿರುವ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 17 ಫೆಬ್ರವರಿ 2025ರಂದು ಮಧ್ಯಾಹ್ನ 2-00 ಗಂಟೆಗೆ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಡಾ. ಸುಭಾಷ್ ಪಟ್ಟಾಜೆ ಇವರ’ಬಹುಮುಖಿ’,ವಿಶ್ವನಾಥ ನಾಗಠಾಣ ಇವರ ‘ಕೃತಿ ಶೋಧ’, ಮೋಹನ ಕುಂಟಾರ್ ಇವರ ಖ್ಯಾತ ಮಲಯಾಳಂ ಸಾಹಿತಿ ಎಂ. ಟಿ. ವಾಸುದೇವನ್ ನಾಯರ್ ಇವರ ಆಯ್ದ ಕತೆಗಳು ಕನ್ನಡಾನುವಾದ ‘ಇರುಳಿನ ಆತ್ಮ’ ಹಾಗೂ ‘ಪುರಾಣ ಕಥಾ ಕೋಶ’ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ.
ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಮ್ಮದಾಲಿ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸುಭಾಷ್ ಪಟ್ಟಜೆ, ವಿಶ್ವನಾಥ ನಾಗಠಾಣ ಮತ್ತು ಮೋಹನ ಕುಂಟಾರ್ ಇವರುಗಳು ಕೃತಿ ಲೋಕಾರ್ಪಣೆಗೊಳ್ಳಲಿದ್ದು, ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ರಾಜಶೇಖರ ಹಳೆಮನೆ, ಉಡುಪಿ ಆರ್.ಆರ್.ಸಿ. (ಮಾಹೆ) ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಎಸ್. ಆರ್., ವಿಮರ್ಶಕರಾದ ಶ್ರೀ ವಿಕಾಸ್ ಹೊಸಮನಿ, ಲೇಖಕರು ಹಾಗೂ ಯಕ್ಷಗಾನ ಕಲಾವಿದರಾದ ಡಾ. ತಾರಾನಾಥ ವರ್ಕಾಡಿ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ.