ಹಾಸನ : ಚೈತ್ರೋದಯ ಪ್ರಕಾಶನ ಇವರ ವತಿಯಿಂದ ಶ್ರೀಮತಿ ಲಕ್ಷ್ಮೀದೇವಿ ದಾಸಪ್ಪನವರ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 05 ಜನವರಿ 2024ರಂದು ಬೆಳಿಗ್ಗೆ 10-30 ಗಂಟೆಗೆ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ವಿದ್ವಾಂಸರಾದ ಶ್ರೀ ಪರಮೇಶ್ವರ ವಿ. ಭಟ್ ಇವರು ವಹಿಸಲಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ನಾಯಕರಹಳ್ಳಿ ಮಂಜೇಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಬಿಡುಗಡೆಗೊಳ್ಳಲಿರುವ ಕೃತಿ ‘ಬಿಡಿ ಹೂಗಳು’ ಇದರ ಪರಿಚಯವನ್ನು ಹಿರಿಯ ಸಾಹಿತಿ ಶ್ರೀಮತಿ ಸುಶೀಲಾ ಸೋಮಶೇಖರ್ ಮತ್ತು ‘ಮಹಾನ್ ಚೇತನಗಳಿಗೆ ನಮನಗಳು’ ಎಂಬ ಕೃತಿಯ ಪರಿಚಯವನ್ನು ಹಿರಿಯ ಗಮಕ ವ್ಯಾಖ್ಯಾನಕಾರರಾದ ಕೆ.ಆರ್. ಕೃಷ್ಣಯ್ಯ ಇವರುಗಳು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಕಲಾಶ್ರೀ ಗಣೇಶ ಉಡುಪ ಮತ್ತು ಶ್ರೀ ದಿಬ್ಬೂರು ರಮೇಶ್ ಇವರಿಂದ ಕವನ ಗಾಯನ ಮತ್ತು ಚಿ.ರಾ. ಸುಧನ್ವ ಎಸ್. ಇವರಿಂದ ಕವನ ವಚನ ನಡೆಯಲಿದೆ.