ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಕೃತಿ ಲೋಕಾರ್ಪಣೆ, ತುಳು ಮತ್ತು ಕನ್ನಡ ಕವಿಗೋಷ್ಠಿ ಸಹಿತ ‘ಸಾಹಿತ್ಯ ವೈಭವ 2026’ ಕಾರ್ಯಕ್ರಮ ದಿನಾಂಕ 25 ಜನವರಿ 2026ನೇ ಭಾನುವಾರ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮಂಗಳೂರು ಇಲ್ಲಿನ ಅಭಿಷೇಕ ಮಂದಿರ ಸಭಾಂಗಣದ ಚುಟುಕು ಬ್ರಹ್ಮ ದಿನಕರ ದೇಸಾಯಿ ವೇದಿಕೆಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ನೇಮು ಪೂಜಾರಿ ಇರಾ ಇವರ ‘ಚುಟುಕು ಕಾವ್ಯ ಕಾಮಿನಿ’ ಎಂಬ ಚುಟುಕುಗಳ ಸಂಕಲನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಇವರ ‘ಕೋಲ್ಮಿಂಚು’ ಎಂಬ ನ್ಯಾನೋ ಕತೆಗಳ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ‘ಚುಟುಕು ಕಾವ್ಯ ಕಾಮಿನಿ’ ಕೃತಿಯನ್ನು ಕವಯಿತ್ರಿ, ಸಾಹಿತಿ ಹಾಗೂ ವಿಮರ್ಶಕರಾದ ವಿ. ಸೀತಾಲಕ್ಷ್ಮಿ ವರ್ಮ ವಿಟ್ಲ ಅರಮನೆ ಪರಿಚಯಿಸಿದರೆ, ‘ಕೋಲ್ಮಿಂಚು’ ಕೃತಿಯನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಹಿತೇಶ್ ಕುಮಾರ್ ಎ. ಪರಿಚಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಳೂರಿನ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ಎಸ್. ಗಣೇಶ್ ರಾವ್ ಉದ್ಘಾಟಿಸಿ “ಮನುಷ್ಯ ಮನುಷ್ಯನ ಸಂಬಂಧ ಚುಟುಕು ಸಾಹಿತ್ಯದಿಂದ ವೃದ್ಧಿಯಾಗಬೇಕು, ಸಾಹಿತ್ಯ ನಿಂತ ನೀರಾಗದೆ ನಿರಂತರ ಹರಿಯುತ್ತಿರಬೇಕು” ಎನ್ನುವ ಆಶಯದೊಂದಿಗೆ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವರಾಮ ಕಾಸರಗೋಡು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರೊ. ಪಿ. ಕೃಷ್ಣಮೂರ್ತಿ, ಹಿರಿಯ ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಕವಿ, ಸಂಘಟಕರಾದ ಡಾ. ಸುರೇಶ ನೆಗಳಗುಳಿ, ರೇಮಂಡ್ ಡಿಕೂನ ತಾಕೊಡೆ, ಸುಭಾಷ್ ಪೆರ್ಲ ಗೌರವ ಉಪಸ್ಥಿತಿಯಲ್ಲಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕೃತಿಕಾರರಿಗೆ ಫಲಪುಷ್ಪಗಳನ್ನಿತ್ತು ಶಾಲು ಹೊದಿಸಿ ಗೌರವಿಸಲಾಯಿತು. ಕು. ದಿಶಾ ಸಿ.ಜಿ. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪಾಲಕೃಷ್ಣ ಶಾಸ್ತ್ರಿ ಸ್ವಾಗತಿಸಿ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ವಂದಿಸಿದರು. ಪರಿಷತ್ತಿನ ಕಾರ್ಯದರ್ಶಿ ರಶ್ಮಿ ಸನಿಲ್ ಹಾಗೂ ಜೊತೆ ಕಾರ್ಯದರ್ಶಿ ರಾಜೇಶ್ವರಿ ಎಚ್. ಬಜ್ಪೆ ನಿರ್ವಹಿಸಿದರು. ಪರಿಷತ್ತಿನ ಕೋಶಾಧಿಕಾರಿ ಭಾಸ್ಕರ್ ಎ. ವರ್ಕಾಡಿ ಹಾಗೂ ಕವಯಿತ್ರಿ ಸೌಮ್ಯಾ ಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕವಯಿತ್ರಿ ಹಾಗೂ ಸಂಘಟಕರಾದ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ಹಾಗೂ ಹಿರಿಯ ಕವಿಗಳಾದ ಎನ್. ಸುಬ್ರಾಯ ಭಟ್ ಅಧ್ಯಕ್ಷತೆಯಲ್ಲಿ ಕನ್ನಡ ಕವಿಗೋಷ್ಠಿ ನಡೆಯಿತು.
ತುಳು ಕವಿಗೋಷ್ಠಿಯಲ್ಲಿ ಸವಿತಾ ಕರ್ಕೇರ ಕಾವೂರು, ನಿಶಾನ್ ಅಂಚನ್, ಅನುರಾಧಾ ರಾಜೀವ್ ಸುರತ್ಕಲ್, ಜಯರಾಮ್ ಪಡ್ರೆ, ಅಶೋಕ ಎನ್. ಕಡೇಶಿವಾಲಯ, ಪ್ರಶಾಂತ್ ಆಚಾರ್ಯ ಎಡಪದವು, ನಳಿನಿ ಭಾಸ್ಕರ್ ರೈ ಮಂಚಿ, ಪದ್ಮನಾಭ ಪೂಜಾರಿ ನೇರಂಬೋಳು, ದೀಪಾ ಸದಾನಂದ, ಸೌಮ್ಯ ಆರ್. ಶೆಟ್ಟಿ, ವಿಶ್ವನಾಥ ಕುಲಾಲ್ ಮಿತ್ತೂರು ಹಾಗೂ ಆರ್ಯನ್ ಸವನಾಲ್ ಭಾಗವಹಿಸಿದರು.
ಹಾಗೆಯೇ ಕನ್ನಡ ಕವಿಗೋಷ್ಠಿಯಲ್ಲಿ ಸೌಮ್ಯಾ ಗೋಪಾಲ್, ಹಂಸರಾಗ ಶೆಟ್ಟಿ, ವಿಘ್ನೇಶ ಕೆ. ಭಿಡೆ, ಯಂ.ಪಿ. ಬಷೀರ್ ಅಹ್ಮದ್ ಬಂಟ್ವಾಳ, ಪಾರ್ವತಿ ಶಾಸ್ತ್ರಿ ಪುತ್ತೂರು, ಪರಿಮಳ ಮಹೇಶ್ ರಾವ್, ಎಂ.ಎ. ಮುಸ್ತಫಾ ಬೆಳ್ಳಾರೆ, ಸತೀಶ್ ಬಿಳಿಯೂರು, ಪ್ರೇಮಾ ಶ್ರೀಕೃಷ್ಣ, ಆಯಿಷಾ ಪೆರ್ನೆ, ಹರ್ಷಿತಾ ಎಸ್. ಶಾಂತಿಮೂಲೆ, ರಾಧಿಕಾ ಗಿರೀಶ್ ಮಯ್ಯ ಬಿ.ಸಿ.ರೋಡ್, ನಾರಾಯಣ ಕುಂಬ್ರ, ಮಂಡ್ಯ ಅನಾರ್ಕಲಿ ಸಲೀಂ ಮಂಗಳೂರು, ಬದ್ರುದ್ದೀನ್ ಕೂಳೂರು, ಪ್ರದೀಪ್ ಕೊಟ್ಟಿಂಜ ಹಾಗೂ ಬಿ.ಎಂ. ಆಕಾಶ್ ಭಾಗವಹಿಸಿದರು.
