ಕಟೀಲು : ಕಟೀಲು ಯಕ್ಷಗಾನ ಮೇಳದ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ ಅವರ ಅರ್ಥ ವಿವರಣೆಯ ‘ಸಮುದ್ರಮಥನ-ಮೈರಾವಣ’, ‘ಶ್ರೀ ಕೃಷ್ಣ ಪಾರಿಜಾತ- ವಸ್ತ್ರಾಪಹಾರ ದುಶ್ಯಾಸನ ವಧೆ’ ಹಾಗೂ ‘ಸತ್ಯಹರಿಶ್ಚಂದ್ರ ದಕ್ಷಾಧ್ವರ’ ಪ್ರಸಂಗಗಳ ಕೃತಿಗಳನ್ನು ದಿನಾಂಕ 07-12-2023ರಂದು ಕಟೀಲು ಮೇಳಗಳ ತಿರುಗಾಟ ಸಂದರ್ಭ ರಂಗಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು.
ಕೃತಿಗಳ ಪ್ರಾಯೋಜಕರಾದ ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಮುಂಬೈ ಉದ್ಯಮಿ ಭಾಸ್ಕರ ಆಳ್ವ, ಅರ್ಚಕರಾದ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ ಮತ್ತು ಶ್ರೀಹರಿ ಆಸ್ರಣ್ಣ ಉಪಸ್ಥಿತರಿದ್ದರು. “ಕಳೆದ ನಾಲ್ಕು ದಶಕಗಳಿಂದ ಕಲಾವಿದರಾಗಿರುವ ವಿಷ್ಣುಶರ್ಮರು ವೇಷಧಾರಿಯಾಗಿ, ಅರ್ಥವಾದಿಯಾಗಿ ಪ್ರಸಂಗಗಳ ನಡೆಯನ್ನು ತಿಳಿದಿರುವ ಅನುಭವಿ. ಈ ಕೃತಿಗಳು ಹವ್ಯಾಸಿ ಕಲಾವಿದರಿಗೆ ಪ್ರಯೋಜನವಾಗಲಿವೆ” ಎಂದು ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು.
ಕಟೀಲು ಮೇಳದ ರಂಗಸ್ಥಳದಲ್ಲೇ ನನ್ನ ಕೃತಿಗಳು ಬಿಡುಗಡೆಯಾದದ್ದು ನನ್ನ ಭಾಗ್ಯ ಎಂದು ವಿಷ್ಣು ಶರ್ಮ ಹೇಳಿದರು.