Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ‘ಕೊಡವ ಮಕ್ಕಡ ಕೂಟ’ದ 26ನೆಯ ಕೃತಿ ಉಳುವಂಗಡ ಕಾವೇರಿ ಉದಯರವರ ‘ಚಿಗುರೆಲೆಗಳು’ – ವೈಲೇಶ್ ಪಿ.ಎಸ್. ಕೊಡಗು
    Literature

    ಪುಸ್ತಕ ವಿಮರ್ಶೆ | ‘ಕೊಡವ ಮಕ್ಕಡ ಕೂಟ’ದ 26ನೆಯ ಕೃತಿ ಉಳುವಂಗಡ ಕಾವೇರಿ ಉದಯರವರ ‘ಚಿಗುರೆಲೆಗಳು’ – ವೈಲೇಶ್ ಪಿ.ಎಸ್. ಕೊಡಗು

    June 24, 2023Updated:August 19, 2023No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಚಿಕ್ಕಮ್ಮನ ಅಸಡ್ಡೆಗೆ ಗುರಿಯಾದರೂ ಮಲ ಸೋದರಿಯ ಪ್ರೀತಿ ಸ್ನೇಹ ವಿಶ್ವಾಸ ಒಡಹುಟ್ಟಿದವರನ್ನು ಮೀರಿಸುವಂತಿದ್ದ ಕಾರಣದಿಂದ ಸೀತ ಮತ್ತು ಗೀತ ಒಟ್ಟಿಗೆ ವಿದ್ಯಾಭ್ಯಾಸವನ್ನು ನೆರೆಕೆರೆಯ ಮಕ್ಕಳೊಂದಿಗೆ ಬೆರೆಯುತ್ತಾ ಮುಗಿಸಿದರು. ಓದುತ್ತಿರುವಾಗಲೇ ತಮ್ಮ ಆಸಕ್ತಿಯನ್ನು ಹೊರಗೆಡಹಿದ ಟೋಮಿ ಮತ್ತು ರಫೀಕ್‌ರು ತಮ್ಮ ಮನದ ಇಚ್ಛೆಯೊಂದಿಗೆ ತಂದೆ ತಾಯಿಯರ ಆಸೆಗಳನ್ನು ಪೂರೈಸಲು ಶ್ರಮಿಸುತ್ತಿದ್ದರು. ವಯಸ್ಸಿಗೆ ತಕ್ಕಂತೆ ಯಾವುದೇ ಬೇಧ ಭಾವ ಅರಿಯದ ಪುಟ್ಟ ಮಕ್ಕಳು ಹೊಂದಿಕೊಂಡು ಬೆಳೆಯುತ್ತಾರೆ. ಅದಕ್ಕೆ ಪೂರಕವಾದ ವಾತಾವರಣವನ್ನು ಪೋಷಕರು ನಿರ್ಮಿಸಿ ಕೊಡುವ ಪ್ರಯತ್ನ ಮಾಡಿದರು. ಹಣ ಗಳಿಸುವ, ಗುಣ ಬೆಳೆಸಿಕೊಳ್ಳುವ ಮತ್ತು ವಿದ್ಯೆಯ ಮಹತ್ವವನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವಲ್ಲಿ ಲೇಖಕಿ ಸಮರ್ಥವಾಗಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಬಡವಾಗುವ ಕೂಸಿನ ಚಿತ್ರಣ ಮತ್ತು ಸಹಪಾಠಿಗಳಿಂದ ತನ್ನ ತಂದೆಯೊಂದಿಗೆ ಮಾತನಾಡಲು ಅವಕಾಶ ಇವೆಲ್ಲವೂ ನೈಜ ಘಟನೆಯೆಂಬಂತೆ ಬಿಂಬಿತವಾಗಿವೆ. ಟೋಮಿಯ ಕಾಲಿಗೆ ಪೆಟ್ಟು ಬಿದ್ದು ಶಾಲೆಗೆ ಹೋಗಲಾಗದ ಪರಿಸ್ಥಿತಿಯು ಉತ್ತಮವಾಗಿ ಮೂಡಿಬಂದಿದೆ. ಆ ಸಂದರ್ಭದಲ್ಲಿ ಗೆಳೆಯರು ನೀಡುವ ಸಹಾಯಹಸ್ತ, ಮಾನಸಿಕ ಧೈರ್ಯ ಮತ್ತು ಪರಸ್ಪರ ಸಹಕಾರವನ್ನು ಸೂಚಿಸುತ್ತಾ ಗೆಳೆಯರ ನಡುವಣ ಸಂಬಂಧವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಕೋನವನ್ನು ಸರಿಯಾದ ರೀತಿಯಲ್ಲಿ ತಿಳಿಸಿದ್ದಾರೆ. ಹಾಗೆಯೇ ಪರಿಸ್ಥಿತಿಗೆ ಅನುಗುಣವಾಗಿ ಜಾಣ್ಮೆ, ಚಾಕಚಕ್ಯತೆ, ಧೈರ್ಯದಿಂದ ಎದುರಿಸುವುದು ಹೇಗೆಂಬುದನ್ನು ಮಣಿಯು ಬೈಕಿನ ಪತ್ತೆದಾರಿಯಾದ ಘಟನೆಯು ವಿವರಿಸುತ್ತದೆ. ಶಾಲೆಯ ಪುಟ್ಟ ಪ್ರವಾಸ ಪ್ರಯಾಸ ಆಗದಿರುವಂತೆ ವಹಿಸಬೇಕಾದ ಎಚ್ಚರಿಕೆಯನ್ನು ಗುರುಗಳು ಮಾತ್ರವಲ್ಲ ಮಕ್ಕಳು ಸಹ ಹೇಗೆ ನಿಭಾಯಿಸಬಹುದೆಂಬ ಮಾತಿನ ಜೊತೆಗೆ ಎಳವೆಯಿಂದ ಪ್ರೌಢಾವಸ್ಥೆಗೆ ಜಾರುವ ಮಕ್ಕಳನ್ನು ನಿರ್ಲಕ್ಷಿಸದಂತೆ ತಂದೆ ತಾಯಿಗಳಿಗೆ ಎಚ್ಚರಿಕೆ ನೀಡಿದಂತಿದೆ. ಜೊತೆಗೆ ನೀರಿನ ಸಮೀಪದಲ್ಲಿ ಸಾಮಾನ್ಯವಾಗಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಜೊತೆಯಲ್ಲಿ ಈಜು ಗೊತ್ತಿರುವವರಿದ್ದರೆ ಒಳ್ಳೆಯದು ಎಂದು ತಿಳಿಸಿದ್ದಾರೆ. ಮಣಿಯ ಹಾಡಿನ ನೆಪದಲ್ಲಿ ಕಾವೇರಿಯವರು ಕವಿತೆಯೊಂದನ್ನು ಸಹ ಬಳಸಿಕೊಂಡಿದ್ದಾರೆ. ನಂತರ ತಂಗಿ ಪುಟ್ಟ ಗೀತಾಳ ಖಾಯಿಲೆಯ ಕಾರಣದಿಂದ ತಲೆಗೂದಲು ಉದುರಿದಾಗ ಸೀತ ಮಾತ್ರವಲ್ಲದೇ ಅವರ ಗೆಳೆಯ ಗೆಳತಿಯರು ಸಹ ಕೇಶ ಮುಂಡನ ಮಾಡಿಸಿಕೊಳ್ಳಲು ಮುಂದಾಗಿ ಗೀತಳಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಾರೆ. ಮುಂದೆ ಸಾಗಿದಂತೆ ಇಬ್ಬರು ದುಷ್ಕರ್ಮಿಗಳು ಸೇರಿಕೊಂಡು ಮಿತ್ರ ದ್ರೋಹದ ಅಲೋಚನೆಯಿಂದ ತಮ್ಮ ಗೆಳೆಯರನ್ನು ಅಪಹರಣ ಮಾಡಿದ ನಂತರ ಮಕ್ಕಳೆಲ್ಲರೂ ಸೇರಿಕೊಂಡು ಹೇಗೆ ಕಿಡಿಗೇಡಿಗಳನ್ನು ಸದೆಬಡಿದರು, ಯಾರ್ಯಾರ ಸಹಾಯಹಸ್ತ ಇವರಿಗೆ ದೊರೆಯಿತು ಎಂಬುದನ್ನು ತಿಳಿಯಲು ‘ಚಿಗುರೆಲೆಗಳು’ ಕೃತಿಯನ್ನು ಓದಿ ತಿಳಿದುಕೊಳ್ಳಲು ಓದುಗರಲ್ಲಿ ಕೋರಿಕೆ.

    ಬೇರೆಬೇರೆ ಭಾಷೆಗಳಲ್ಲಿ ಸಾಹಿತ್ಯ ರಚಿಸುತ್ತಿರುವ ಉಳುವಂಗಡ ಕಾವೇರಿಯವರು ಮಕ್ಕಳ ಮನಸ್ಸನ್ನು ಗೆಲ್ಲುವಂತಹ ಮಕ್ಕಳ ಕಥೆಯನ್ನು ರಚಿಸಿದ್ದಾರೆ. ಯಾವುದೇ ರೀತಿಯ ಎಷ್ಟೇ ಸಾಹಿತ್ಯದ ರಚನೆಯನ್ನು ಮಾಡಿದವರಿಗೂ ಸಹ ಮಕ್ಕಳ ಸಾಹಿತ್ಯ ರಚನೆಯ ಸಾಮರ್ಥ್ಯದ ಕೊರತೆಯಿರುತ್ತದೆ. ಮಕ್ಕಳ ಸಾಹಿತ್ಯದಲ್ಲಿ ಮುಗ್ಧ ಮಕ್ಕಳಿಗೆ ಅರಿವಾಗುವಂತಹ ಬಾಲ ಭಾಷೆ ಅಥವಾ ಅತ್ಯಂತ ಸರಳವಾದ ಭಾಷೆಯ ಅಗತ್ಯವಿದೆ. ಅಷ್ಟೇ ಅಲ್ಲದೇ ಮಕ್ಕಳಿಗೆ ಮುಂದಿನ ಬದುಕಿನಲ್ಲಿ ತಾವು ನಡೆಯಬೇಕಾದ ಹಾದಿಯನ್ನು ಸೂಕ್ಷ್ಮವಾಗಿ ಮತ್ತು ಸೂಕ್ತವಾದ ರೀತಿಯಲ್ಲಿ ಹೇಳಬೇಕಾದ ಚಾಕಚಾಕ್ಯತೆಯು ಇರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಬರುವಂತೆ ಬರೆಯುವ ನೈಪುಣ್ಯತೆ ಬೇಕು. ಇವೆಲ್ಲವೂ ಕಾವೇರಿಯವರಿಗೆ ಒದಗಿರುವುದನ್ನು ಈ ಕೃತಿಯು ಹೇಳುತ್ತದೆ. ಕಾವೇರಿಯವರು ತಮ್ಮ ಭಾಷೆಯಾದ “ಕೊಡವ ತಕ್ಕ್”ನ ಧಾಟಿಯ ಹಲವಾರು ಪದಗಳನ್ನು ಇಲ್ಲಿ ಉಪಯೋಗಿಸಿಕೊಂಡಿರುವುದು ಗಮನಕ್ಕೆ ಬರುತ್ತದೆ. ಕುವೆಂಪು ಅಥವಾ ಬೇಂದ್ರೆಯವರೂ ಸಹ ತಮ್ಮ ಕವಿತೆಗಳಲ್ಲಿ ಅನ್ಯ ಭಾಷೆಗಳನ್ನು ಬಳಸಿಕೊಂಡಿದ್ದಾರೆ. ಕನ್ನಡ ಮಕ್ಕಳ ಮನಸ್ಸನ್ನು ಗೊಂದಲಕ್ಕೊಡ್ಡುವ ಪದಗಳು ಕೆಳಗಿನಂತೆ ಇವೆ. ಶಾಲೆಯಲ್ಲಿಡಿ, ಎಲ್ಲಾರು, ಉಷಾರು, ಅಪ್ಪಮ್ಮ ವ್ಯಾಕರಣ ದೋಷವುಳ್ಳ ಪದಗಳು. ಈ ಕೃತಿಯನ್ನು ಮಕ್ಕಳ ಕಥೆಯೆಂದು ಗುರುತಿಸಲ್ಪಡುವ ಕಾರಣದಿಂದ ಓದುವ ಚಿಕ್ಕ ಮಕ್ಕಳ ಬರವಣಿಗೆಯಲ್ಲಿಯೂ ಸಹ ಇಂತಹ ತಪ್ಪುಗಳು ನುಸುಳುವ ಸಾಧ್ಯತೆ ಇದೆ. ಹಾಗಾಗಿ ಈ ಪದಗಳು ಮಕ್ಕಳ ಸಾಹಿತ್ಯದಲ್ಲಿ ಬೇಡವಾಗಿತ್ತು ಎಂಬ ಅನಿಸಿಕೆ ನನ್ನದಾಗಿದೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಕರ್ನಾಟಕ, ಬಾಲವಿಕಾಸ ಅಕಾಡೆಮಿ ಧಾರವಾಡ, ಇವರ 2019ನೇ ಸಾಲಿನ ‘ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ’ಯು ಉಳವಂಗಡ ಕಾವೇರಿ ಉದಯರವರ ಕೃತಿ ‘ಚಿಗುರೆಲೆಗಳು’ ಇದಕ್ಕೆ ದೊರೆತಿದೆ ರೂ. 15,000/- ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಅವರನ್ನು ಗೌರವಿಸಿದ್ದಾರೆ. ಎಳೆಯ ಮಕ್ಕಳ ಮೆದುಳು ಸಮುದ್ರವಿದ್ದಂತೆ. ಸರಿಯಾದ ಸಂಗತಿಗಳನ್ನು ಮಕ್ಕಳಿಗೆ ನೀಡುವುದು ಮಹತ್ವದಾಗಿದೆ ಎಂಬ ಅಂಶವನ್ನು ಈ ಕೃತಿಯ ಮೂಲಕ ಲೇಖಕರು ಸಾರಿದ್ದಾರೆ. ಮಕ್ಕಳ ಬದುಕಿನ ಹಲವಾರು ಮಜಲುಗಳನ್ನು ವಿವರಿಸಿದ್ದಾರೆ. ಮುಗ್ಧ ಮನಸ್ಸಿನಲ್ಲಿ ಯಾವ ಬೀಜ ಬಿತ್ತುತ್ತೇವೆಯೋ ಅದೇ ಫಲವನ್ನು ಕಾಣುತ್ತವೆ. ಉತ್ತಮ ಗುರುವಿನ ಮಾರ್ಗದರ್ಶನ ಬದುಕಿನ ಮಾರ್ಗವನ್ನೇ ಬದಲಾಯಿಸುತ್ತದೆ. ಪತಿ-ಪತ್ನಿ ಪರಸ್ಪರ ವೈಮನಸ್ಸಿನಿಂದ ಬೇರೆ ಬೇರೆ ಸಂಸಾರ ಕಟ್ಟಿಕೊಳ್ಳುವರು, ತಮ್ಮ ಸುಖ ಸಂತೋಷಗಳ ಬಗ್ಗೆ ಆಲೋಚಿಸುವರು. ಆದರೆ, ಮಕ್ಕಳು ತಂದೆ ತಾಯಿಯರ ವಾತ್ಸಲ್ಯದಿಂದ ವಂಚಿತರಾಗಿ ಅನಾಥ ಪ್ರಜ್ಞೆಯಲ್ಲಿ ಬದುಕಬೇಕಾಗುತ್ತದೆ ಎಂಬ ಸಂದೇಶವನ್ನು ಇಲ್ಲಿ ಕಾಣಬಹುದು. ಮಕ್ಕಳು ಸ್ನೇಹ ಜೀವಿಗಳು. ಸಂಘಟಿತವಾದ ಬದುಕೇ ಶ್ರೇಷ್ಠ ಎಂಬುದನ್ನು ಅವರು ಅರಿತಿರುವರು. ಗೆಳೆಯರ ಕಪ್ಪ ಸುಖಗಳಲ್ಲಿ ಭಾಗಿಯಾಗಿ, ಒಗ್ಗಟ್ಟನಲ್ಲಿ ಬಲವಿದೆ” ಎಂಬ ವಿಚಾರವನ್ನು ಈ ಕಾದಂಬರಿಯು ಸಾರುತ್ತದೆ.

    – ವೈಲೇಶ್ ಪಿ.ಎಸ್. ಕೊಡಗು

    ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್‌ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.

    ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ.

    ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, “ಬೊಮ್ಮಲಿಂಗನ ಸಗ್ಗ” ಮುಕ್ತಕಗಳು, “ಮನದ ಇನಿದನಿ” ಲೇಖನ ಮಾಲೆಗಳ ಕೃತಿ ಮತ್ತು “ಕೊಡಗಿನ ಸಾಹಿತ್ಯ ತಪಸ್ವಿಗಳು” ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ.

    ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುದ್ದಾರೆ.

    ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರ ರಾಗಿದ್ದಾರೆ.

    ಇವರು “ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ”, “ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ” “ಸಾಹಿತ್ಯ ರತ್ನ” ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.

    ವೈಲೇಶ್ ಪಿ.ಎಸ್.
    ಪಿ.ಕೆ. ಸಿಡ್ಲಯ್ಯ, ಬ್ರಹ್ಮಲಿಂಗೇಶ್ವರ ನಿಲಯ
    ಕೆ. ಬೋಯಿಕೇರಿ ಗ್ರಾಮ ಮತ್ತು ಅಂಚೆ
    ವಿರಾಜಪೇಟೆ ತಾಲ್ಲೂಕು, ದ. ಕೊಡಗು -571218
    8861405738 ದೂರವಾಣಿ

    ಕೃತಿಗಾರರ ಬಗ್ಗೆ :
    ಉಳುವಂಗಡ ಕಾವೇರಿ ಉದಯ ಇವರು ‘ಚಿಗುರೆಲೆಗಳು’ ಕೃತಿಯ ಲೇಖಕಿ. ಚಂಗುಲಂಡ ಸಿ. ಮಾದಪ್ಪ ಮತ್ತು ಸರಸ್ವತಿ ದಂಪತಿಯರ ಸುಪುತ್ರಿ. ಇವರು ಪುತ್ತೂರು ಸೆಂಟ್ ಫೀಲೋಮಿನ ಕಾಲೇಜಿನ ಬಿ.ಕಾಂ. ಪದವೀಧರರು.

    ಚಿತ್ರಕಲಾವಿದೆಯಾದ ಉಳುವಂಗಡ ಕಾವೇರಿಯವರು ಟಿ. ಶೆಟ್ಟಿಗೇರಿ ಸಂಭ್ರಮ ಮಹಿಳಾ ಸಂಸ್ಥೆಯ ಸಕ್ರಿಯ ಸದಸ್ಯೆ. ಶ್ರೀಮಂಗಲ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಮತ್ತು ಕೊಡವ ತಕ್ಕ ಎಳ್ತ್ ಕಾರಡ ಕೂಟದ ಸದಸ್ಯೆ ಆಗಿರುವರು. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗುದ್ದು, ಇವರ ಬರಹಕ್ಕೆ ಹಲವಾರು ಪುರಸ್ಕಾರಗಳು ದೊರೆತಿವೆ. ಬಹುಭಾಷಾ ಕವಿಯಾಗಿ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವರು.

    ಇವರು ಬರೆದಿರುವ ಕೊಡಗ್‌ರ ಸಿಪಾಯಿ, ಚಾಯಿ, ಶ್ರೀ ಈಶ್ವರ ಅಯ್ಯಪ್ಪ ದೇವಸ್ಥಾನ ಇತಿಹಾಸ, ಒತ್ತೋರ್ಮೆ, ಕೊದಿರ ಪೂಮಳೆ, ಕವನ ಕಾವೇರಿ, ಕೊಡಗ್‌ರ ದೇವನೆಲೆ, ಶ್ರೀ ಶನೀಶ್ವರ ದೇವಸ್ಥಾನ ಇತಿಹಾಸ, ಭೂಲೋಕತ್‌ರ ಜನ್ಮ, ಕೊಡಗ್‌ರ ಸಂಗೀತ ಸಾಹಿತ್ಯ ಕಲಾವಿದಂಗ ಮತ್ತು ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ಒಟ್ಟು ಹನ್ನೊಂದು ಕೃತಿಗಳು ಪ್ರಕಟವಾಗಿದ್ದು, ‘ಚಿಗುರೆಲೆಗಳು’ ಹನ್ನೆರಡನೆಯದ್ದಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಪ್ರದರ್ಶನಗೊಂಡ ‘ಸ್ಪಿರಿಚುವಲ್ ರೂಮಿನೀಶನ್’
    Next Article ‘ನೃತ್ಯಕಾವ್ಯ’ ಕೃತಿಯ ಲೋಕಾರ್ಪಣೆ ಹಾಗೂ ‘ಭಾವಸ್ಥ’ ನೃತ್ಯ ಕಾರ್ಯಕ್ರಮ   
    roovari

    Add Comment Cancel Reply


    Related Posts

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.