ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಇದರ ವತಿಯಿಂದ ದಿನಾಂಕ 29 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ 14ನೇ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶದಲ್ಲಿ ಕೊಡಮಾಡಲಿರುವ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಹರನ್ನು ಶಿಫಾರಸು ಮಾಡಿ ಅವರ ಫೋಟೋ ಪರಿಚಯ ಕಳುಹಿಸಲು ಕೋರಿದೆ.
1. ದೊಡ್ಡಬಳ್ಳಾಪುರದ ಶ್ರೀಮತಿ ಎನ್. ರೇಣುಕಾ ನಾಗಪ್ರಿಯ ದತ್ತಿ (ಬೆಂಗಳೂರು ಹೊರತುಪಡಿಸಿ ಕುವೆಂಪು ಸಾಹಿತ್ಯ ಪ್ರಚಾರದಲ್ಲಿ ತೊಡಗಿರುವ ಸಂಘ ಸಂಸ್ಥೆಗಳು, ಸಾಹಿತ್ಯ ರಚನೆ ಮಾಡಿದವರಿಗೆ)
2. ಶ್ರೀ ರಾಂ.ಕೆ. ಹನುಮಂತಯ್ಯ ಮತ್ತು ಹೆಬ್ಬಗೋಡಿ ಗೋಪಾಲಪ್ಪ ಪುಸ್ತಕ ದತ್ತಿ ಬಹುಮಾನ (ಕತೆ, ಕಾವ್ಯ, ಕಾದಂಬರಿ, ವಿಮರ್ಶೆ/ಪ್ರಬಂಧ, ಸಂಶೋಧನಾ ಲೇಖನಗಳಿಗೆ)
3. ಶ್ರೀಮತಿ ಎಸ್. ಗುಣಸಾಗರಿ ಸಿ. ನಾಗರಾಜ್ ದತ್ತಿ 35 ವರ್ಷದ ಒಳಗಿನ ಯುವ ಬರಹಗಾರರಿಗೆ ಕೊಡಮಾಡುವ ಪ್ರತಿಭಾ ಪುರಸ್ಕಾರ
4. ಶ್ರೀ ಕೆ. ಕೃಷ್ಣಮೂರ್ತಿ ಪೂಜಾರಿ ಪಾಳ್ಯ ಅವರ ದತ್ತಿ (ಸಾಮಾಜಿಕ ಮತ್ತು ಸಂಗೀತ ಕ್ಷೇತ್ರದ ಸಾಧಕರಿಗೆ)
5. ಡಾ. ಕೆ. ರಮಾನಂದ ಅವರ ದತ್ತಿ (ಕಾದಂಬರಿ ರಚನೆಗಾರರಿಗೆ)
6. ಶ್ರೀಮತಿ ಪ್ರಮೀಳಾ ಫಾಲನೇತ್ರ ದತ್ತಿ (ಶಿಕ್ಷಣ ಕ್ಷೇತ್ರದ ಸಾಧಕರಿಗೆ)
7. ಶ್ರೀ ಅನಿಕೇತನ ಶ್ರೀ ಮಾಯಣ್ಣ ದತ್ತಿ (30ರಿಂದ 45 ವರ್ಷ ಯುವ ಸಾಧಕರಿಗೆ ನೀಡುವ ಅನಿಕೇತನ ಪ್ರಶಸ್ತಿ ಒಬ್ಬರು ಮಹಿಳೆ, ಒಬ್ಬರು ಪುರುಷ)
8. ಮಾಗಡಿ ಶ್ರೀಮತಿ ಕೌಸಲ್ಯ ಶ್ರೀ ಪಾನ್ಯಂ ನಟರಾಜ್ ಸಮಾಜ ಸೇವಾ ದತ್ತಿ ಪ್ರಶಸ್ತಿ (50 ದಾಟಿದ ಸಾಹಿತ್ಯ, ಸಂಗೀತ, ಸಮಾಜ ಸೇವಾನಿರತ ಇಬ್ಬರಿಗೆ)
9. ಡಾ. ಕೃಷ್ಣಪ್ಪ ಕೋಡಿಪಾಳ್ಯ ಅವರ ದತ್ತಿ (ಪ್ರಗತಿ ಪರ ರೈತರು ಇಬ್ಬರಿಗೆ)
ದಯವಿಟ್ಟು ಸಾಧಕರ ಪರಿಚಯ ಮತ್ತು ಫೋಟೋ ಜೊತೆಗೆ ಅಂಚೆ ಮೂಲಕ ದಿನಾಂಕ 10 ಸೆಪ್ಟೆಂಬರ್ 2024ರ ಒಳಗೆ ಕಳುಹಿಸಿ ಕೊಡಿ. ಡಾ. ಸಿಸಿರಾ, ಕನ್ನಡ ಉಪನ್ಯಾಸಕರು, ಶೇಷಾದ್ರಿಪುರಂ ಮೈನ್, ಪಿ.ಯು. ಕಾಲೇಜು, ಬೆಂಗಳೂರು -560020. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ : 9448880985 ಸಂಪರ್ಕಿಸಿರಿ.