ಬೆಂಗಳೂರು: ‘ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ’ವು ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗಾಗಿ ಲೇಖಕರು ಮತ್ತು ಪ್ರಕಾಶಕರಿಂದ ಕಾದಂಬರಿಗಳನ್ನು ಆಹ್ವಾನಿಸಿದೆ.
ಪ್ರಶಸ್ತಿಯು ರೂಪಾಯಿ ಇಪ್ಪತೈದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಾದಂಬರಿಯು 2024ರಲ್ಲಿ ಪ್ರಕಟವಾಗಿರಬೇಕು. ಕಾದಂಬರಿಯ ಮೂರು ಪ್ರತಿಗಳನ್ನು ದಿನಾಂಕ 30 ಜನವರಿ 2025ರ ಒಳಗಾಗಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎಂ. ಹನೀಫ್ ತಿಳಿಸಿದ್ದಾರೆ.
ಪುಸ್ತಕ ಕಳುಹಿಸಬೇಕಾದ ವಿಳಾಸ:
ಅಧ್ಯಕ್ಷರು, ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ, ನಂ. 118, ‘ಹೊಂಬೆಳಕು’, 5ನೇ ಕ್ರಾಸ್, 1ನೇ ಬ್ಲಾಕ್, ಎಚ್.ಎಂ.ಟಿ . ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು 560073. ಹೆಚ್ಚಿನ ಮಾಹಿತಿಗಾಗಿ : 9686073837, 7760350244