ಉಡುಪಿ :ಉಡುಪಿ ತುಳು ಕೂಟದ ಆಶ್ರಯದಲ್ಲಿ ನಡೆಯುವ ‘ಎಸ್. ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ಗೆ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಗಳು ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು ಹಾಗೂ ಮುದ್ರಿತವಾಗಿರಬಾರದು. ಮುದ್ರಿಸುವಾಗ ಕೌನ್ 1/8 ಆಕಾರದಲ್ಲಿ 120 ಪುಟಗಳನ್ನು ಮೀರದಷ್ಟು ದೀರ್ಘವಾಗಿರಬೇಕು. ಹಸ್ತಪ್ರತಿಗಳು ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿ. ಟಿ. ಪಿ.) ರೂಪದಲ್ಲಿ ಇರಬಹುದು. ಹಸ್ತ ಪ್ರತಿಯನ್ನು 31 ಜನವರಿ 2025ರ ಒಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಕಾದಂಬರಿ ಸ್ಪರ್ಧೆಯ ಸಂಚಾಲಕಿ ಶಿಲ್ಪಾ ಜೋಷಿ – 7892194150 ಇವರನ್ನು ಸಂಪರ್ಕಿಸುವಂತೆ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.