ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ರಿ.)ವು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲೇಖಕಿಯರಿಗಾಗಿ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದೆ.
ಸಣ್ಣ ಕತೆಗಳ ಸಂಕಲನ – 2024 ಜನವರಿಯಿಂದ ದಶಂಬರ್ ತಿಂಗಳ ಕೊನೆಯ ಒಳಗೆ ಪ್ರಕಟಿತವಾದ ಸಣ್ಣ ಕಥಾ ಸಂಕಲನ. ಅತ್ಯುತ್ತಮ ಕಥಾಸಂಕಲನಕ್ಕೆ ಬಹುಮಾನ : ಪ್ರಾಯೋಜಕರು – ಶ್ರೀಮತಿ ಯಶೋದಾ ಜೆನ್ನಿ ಸ್ಮೃತಿ ಸಂಚಯ, ಹಿರಿಯಡ್ಕ, ಉಡುಪಿ ತಾಲೂಕು.
ಏಕಾಂಕ ನಾಟಕ ರಚನಾ ಹಸ್ತಪ್ರತಿ ಸ್ಪರ್ಧೆ : ಸುಮಾರು ಒಂದು ಗಂಟೆ ಅವಧಿಯಲ್ಲಿ ಅಭಿನಯಿಸಬಹುದಾದ (ಫುಲ್ ಸ್ಕೇಪ್ ಹಾಳೆಯಲ್ಲಿ ಡಿ.ಟಿ.ಪಿ. ಮಾಡಿದ 30ರಿಂದ 35 ಪುಟ) ಸಾಮಾಜಿಕ, ಚಾರಿತ್ರಿಕ ಅಥವಾ ಪೌರಾಣಿಕ ನಾಟಕ ಕೃತಿ. ಅತ್ಯುತ್ತಮ ಕೃತಿಗೆ ಬಹುಮಾನ : ಪ್ರಾಯೋಜಕರು – ಸಂದೀಪ ಸಾಹಿತ್ಯ ಪ್ರಕಾಶನ, ಆತ್ರಾಡಿ, ಉಡುಪಿ- 576107.
ಸ್ಪರ್ಧಿಗಳು ತಮ್ಮ ಕೃತಿಗಳನ್ನು ಎರಡೆರಡು ಪ್ರತಿಗಳಂತೆ ದಿನಾಂಕ 15 ಫೆಬ್ರವರಿ 2025ರ ಮೊದಲು ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಮಾರ್ಚ್ ತಿಂಗಳಲ್ಲಿ ಸ್ಪರ್ಧೆಯ ಫಲಿತಾಂಶ, ಬಹುಮಾನ ವಿತರಣೆಯ ಕಾರ್ಯಕ್ರಮವು ನಡೆಯಲಿರುವುದು. ಕೃತಿಗಳನ್ನು ಕಳುಹಿಸಬೇಕಾದ ವಿಳಾಸ : ಕರಾವಳಿ ಲೇಖಕಿಯರ -ವಾಚಕಿಯರ ಸಂಘ (ರಿ.), ‘ಸಾಹಿತ್ಯ ಸದನ’, ಉರ್ವ ಸ್ಟೋರ್ಸ್, ಅಶೋಕನಗರ ಅಂಚೆ ಕಚೇರಿ ಬಳಿ, ಮಂಗಳೂರು -6. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ 9480655247