Subscribe to Updates

    Get the latest creative news from FooBar about art, design and business.

    What's Hot

    ಆತ್ತಾವರದಲ್ಲಿ 109ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ | ಜುಲೈ 18

    July 16, 2025

    ಸಾಗರದಲ್ಲಿ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ | ಜುಲೈ 19

    July 16, 2025

    ರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ನಿಧನ

    July 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ | ಮಾರ್ಚ್ 15
    Competition

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ | ಮಾರ್ಚ್ 15

    January 4, 2025Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ 1978ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15 ಮಾರ್ಚ್ 2025. ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂ. ಜಿ. ಎಂ. ಕಾಲೇಜು ಆವರಣ, ಉಡುಪಿ 576102.

    ಕಾವ್ಯ ಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ರೂಪಾಯಿ 10,000 ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ ಹಾಗೂ 50ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವನಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್: https://govindapairesearch.blogspot.com ದೂರವಾಣಿ ಸಂಖ್ಯೆ ಕಛೇರಿ : 0820-2521159 ಅಥವಾ ಮೊಬೈಲ್‌ ಸಂಖ್ಯೆ 9449471449 / 9480575783

    ಬಹುಮಾನದ ಉಳಿದ ನಿಯಮಗಳು ಹೀಗಿವೆ:-
    1. ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವನಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು.
    2. ತಮ್ಮ ಕವನ ಸಂಕಲನದಲ್ಲಿ ಕನಿಷ್ಠ 40 ಕವನಗಳು ಇರಲೇ ಬೇಕು.
    3. ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.
    4. ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.
    5. ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು. ಹೊರತು ಕವನ ಸಂಕಲನದ ಯಾವ ಭಾಗದಲ್ಲೂ ಇರಕೂಡದು. (ಇದ್ದಲ್ಲಿ ಕವನ ಸಂಕಲನವನ್ನು ತಿರಸ್ಕರಿಸಲಾಗುವುದು).
    6. ಕವನ ಸಂಕಲನವನ್ನು ಮರಳಿ ಪಡೆಯಲಿಚ್ಛಿಸುವವರು ಸಾಕಷ್ಟು ಅಂಚೆಚೀಟಿಯನ್ನು ಅಂಟಿಸಿದ ಲಕೋಟೆಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು.
    7. ಲೇಖಕರು ತಮ್ಮ ಕವನಗಳ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) 15 ಮಾರ್ಚ್ 2025ರ ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸತಕ್ಕದ್ದು. ಮೇ ತಿಂಗಳಲ್ಲಿ ಸಮಿತಿಯು ತನ್ನ ನಿರ್ಣಯವನ್ನು ಕರ್ನಾಟಕದ ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ.
    8. ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವವನ್ನು–ಡೆಮ್ಮಿ 1/8 /, 1/12 ಅಥವಾ 1/8 ಆಕಾರದಲ್ಲಿ ಮುದ್ರಿಸಬೇಕು.
    9. ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಎರಡು ತಿಂಗಳ ಒಳಗಾಗಿ ಮುದ್ರಣ ಮುಗಿದು 12 ಪ್ರತಿಗಳು ಸಮಿತಿಯ ವಶ ಸೇರತಕ್ಕದ್ದು. (ಅದಕ್ಕಿಂತ ವೇಳೆ ಮೀರಿದರೆ ಸಮಿತಿ ಇನ್ನಾರಿಗಾದರೂ ಈ ಬಹುಮಾನ ನೀಡಬಹುದು).
    10. ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೆ ಬಹುಮಾನದ ಮೊತ್ತ ಲೇಖಕರಿಗೆ ಮಾತ್ರವೇ ಸಲ್ಲುತ್ತದೆ.
    11. ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.

    award competition Literature writer
    Share. Facebook Twitter Pinterest LinkedIn Tumblr WhatsApp Email
    Previous Articleನೂತನ ರವೀಂದ್ರ ಮಂಟಪದಲ್ಲಿ ಡಾ. ಎನ್. ಟಿ. ಭಟ್ ಇವರ ಕೃತಿ ಲೋಕಾರ್ಪಣೆ | ಜನವರಿ 06
    Next Article ವಿಶೇಷ ಲೇಖನ : ಕನ್ನಡದ ಶ್ರೇಷ್ಠ ಸಂಶೋಧಕ ಶಂ.ಬಾ. ಜೋಶಿ
    roovari

    Add Comment Cancel Reply


    Related Posts

    ಆತ್ತಾವರದಲ್ಲಿ 109ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ | ಜುಲೈ 18

    July 16, 2025

    2025-26ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

    July 16, 2025

    ‘ಕವಿಗಳು ಕಂಡ ನಮ್ಮ ಕುಡ್ಲ’ ಕವನ, ಕವಿತೆ ಮತ್ತು ಚುಟುಕು ಬರಹ ವಾಚನ | ಕೊನೆಯ ದಿನಾಂಕ ಜುಲೈ 20

    July 16, 2025

    ಕಾರ್ಕಳದಲ್ಲಿ ಉದ್ಘಾಟನೆಗೊಂಡ ‘ವಿದ್ಯಾರ್ಥಿಗಳೆಡೆಗೆ ಪುಸ್ತಕದ ನಡಿಗೆ’ ಕಾರ್ಯಕ್ರಮ

    July 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.