ಬಳ್ಳಾರಿ : ಕಳೆದ ಎರಡು ವರ್ಷಗಳಂತೆಯೇ ಈ ವರ್ಷವೂ ‘ಸಂಗಂ ಸಾಹಿತ್ಯ ಪುರಸ್ಕಾರ’ವನ್ನು ನೀಡಲು ಬಳ್ಳಾರಿಯ ಸಂಗಂ ಸಂಸ್ಥೆ ನಿರ್ಧರಿಸಿದ್ದು, ಈ ಸಲದ ಪುರಸ್ಕಾರವು 2022-24ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕಾದಂಬರಿ ಪ್ರಕಾರಕ್ಕೆ ಮೀಸಲಿರಿಸಲಾಗಿದೆ.
ಈ ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದ್ದು, ಆಸಕ್ತ ಬರಹಗಾರರು, ಪ್ರಕಾಶಕರು ತಮ್ಮ ಕಾದಂಬರಿಗಳನ್ನು ಸ್ಪರ್ಧೆಗೆ ಕಳುಹಿಸಲು ‘ಸಂಗಂ’ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಕೋರಿದ್ದಾರೆ. ಕಾದಂಬರಿಯು 2022-24ರ, ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರಬೇಕು. ಕೃತಿಯನ್ನು ದಿನಾಂಕ 20 ಮಾರ್ಚ್ 2025ರ ಒಳಗಾಗಿ ತಲುಪುವಂತೆ ಕಳುಹಿಸಬೇಕು.
ವಿಳಾಸ: ಅಜಯ ಬಣಕಾರ್, ‘ಹೂ ನಗೆ’ ಪ್ಲಾಟ್ ನಂ- 2, 2ನೇ ಕ್ರಾಸ್, ಬಾಲಾಜಿ ಕಾಲೋನಿ, ತಾಳೂರು ರಸ್ತೆ, ಬಳ್ಳಾರಿ- 583103.