ಮಂಗಳೂರು : ತುಳು ಪರಿಷತ್ ವತಿಯಿಂದ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ದಿನಾಂಕ 22 ಆಗಸ್ಟ್ 2025ರಂದು ತುಳುನಾಡಿನಲ್ಲಿ ಹಬ್ಬಗಳ ಆಚರಣೆ ಮತ್ತು ಸಾಂಸ್ಕೃತಿಕ ಮಹತ್ವ ಎಂಬ ವಿಷಯದ ಬಗ್ಗೆ ವಿಚಾರ ಚಿಂತನೆ ಆಯೋಜಿಸಲಾಗಿತ್ತು.
ತುಳು ಪರಿಷತ್ ಸದಸ್ಯ ಕೃಷ್ಣಮೂರ್ತಿ ಮಾತನಾಡಿ “ಧಾರ್ಮಿಕ ಚಟುವಟಿಕೆಗಳು ಮತ್ತು ಜಾನಪದೀಯ ನಂಬಿಕೆ, ಆಚಾರ ವಿಚಾರಗಳೊಂದಿಗೆ ಹಬ್ಬಗಳು ಆಚರಣೆಯಾಗುತ್ತಿವೆ. ಸಡಗರ, ಸಂಭ್ರಮಗಳೊಂದಿಗೆ ಹಬ್ಬಗಳ ಮಹತ್ವದ ಕುರಿತು ಚಿಂತನೆಯೂ ಅಗತ್ಯವಿದೆ” ಎಂದರು.
ತುಳು ಪರಿಷತ್ತಿನ ಗೌರವ ಅಧ್ಯಕ್ಷ ಸಾಹಿತಿ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ “ಪ್ರಾದೇಶಿಕ ಅನನ್ಯತೆಗಳೊಂದಿಗೆ ಹಬ್ಬಗಳ ಆಚರಣೆ ಮಾಡಿದಾಗ ಹೆಚ್ಚು ಅರ್ಥ ಪೂರ್ಣವಾಗುತ್ತದೆ. ಸಾಂಸ್ಕೃತಿಕ ನೆಲೆ ಗಟ್ಟಿನೊಂದಿಗೆ ವೈವಿಧ್ಯದಿಂದ ಕೂಡಿರುವ ಸಂಪ್ರದಾಯಗಳು ಹಬ್ಬಗಳನ್ನು ಸುಂದರಗೊಳಿಸಿವೆ” ಎಂದರು.
ತುಳು ಪರಿಷತ್ತಿನ ಅಧ್ಯಕ್ಷ ಶುಭೋದಯ ಆಳ್ವಾ ಮಾತನಾಡಿ “ಕೃಷಿ ಪ್ರಧಾನ ವ್ಯವಸ್ಥೆಯ ಹಿನ್ನೆಲೆಯೊಂದಿಗೆ ತುಳುನಾಡಿನಲ್ಲಿ ಹಬ್ಬದ ಆಚರಣೆಗಳು ನಡೆಯುತ್ತಿದ್ದು ವಿಶಿಷ್ಟ ಕ್ರಮಗಳು ರೂಢಿಗತವಾಗಿದೆ” ಎಂದರು. ಲೇಖಕಿ ಸುಧಾ ನಾಗೇಶ್, ಅಮಿತಾ ಅಶ್ವಿನ್ ಉಲ್ಲಾಳ್, ದುರ್ಗಾ ಪ್ರಸಾದ್, ಬಿ. ಶ್ರೀನಿವಾಸ್ ಚರ್ಚೆಯಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ವ್ಯಕಪಡಿಸಿದರು. ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸ್ವಾಗತಿಸಿ. ವಂದಿಸಿದರು.