ಕುಂಬಳೆ : ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಸಂಘಟಕ, ವಿಶ್ರಾಂತ ಅಧ್ಯಾಪಕ ವಿ.ಬಿ. ಕುಳಮರ್ವ ಇವರ 70ನೇ ವರ್ಷಾಚರಣೆಯ ಅಂಗವಾಗಿ ‘ವಿ.ಬಿ. ಕುಳಮರ್ವ-70’ ಸಾಹಿತೋತ್ಸವ ಕಾರ್ಯಕ್ರಮವು ದಿನಾಂಕ 10-12-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.30ಕ್ಕೆ ವಿ.ಬಿ. ಕುಳಮರ್ವರ ಸ್ವಗೃಹವಾದ ಕುಂಬಳೆ ನಾರಾಯಣ ಮಂಗಳದ ಶ್ರೀನಿಧಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಶ್ರೀ ವಿ.ಬಿ. ಕುಳಮರ್ವ ಮತ್ತು ಶ್ರೀಮತಿ ಲಲಿತಾಲಕ್ಷ್ಮೀ ದಂಪತಿಯರು ಉದ್ಘಾಟನೆ ಮಾಡಲಿದ್ದು, ‘ಗಡಿನಾಡ ಸಾಹಿತ್ಯ ಶ್ರೀನಿಧಿ – ವಿ.ಬಿ. ಕುಳಮರ್ವ’ ಕೃತಿ ಬಿಡುಗಡೆ, ಗುರು ನಮನ, ಸನ್ಮಾನ ಮತ್ತು ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 70 ಕವಿ ಮನಸ್ಸುಗಳ ಕವಿಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶಿವರಾಮ ಕಾಸರಗೋಡು, ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹರೀಶ ಸುಲಾಯ ಒಡ್ಡಂಬೆಟ್ಟು, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಆನಂದ ರೈ ಅಡ್ಕಸ್ಥಳ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪಾಲಕೃಷ್ಣ ಶಾಸ್ತ್ರಿ, ವಿಶ್ರಾಂತ ಮುಖ್ಯೋಪಾಧ್ಯಾಯರಾದ ಶ್ರೀ ವಾಸುದೇವ ಭಟ್ (ಶಿವಪಡ್ರೆ), ಕವಿ, ಪತ್ರಕರ್ತರು ಶ್ರೀ ವಿರಾಜ್ ಅಡೂರು, ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಇದರ ಅಧ್ಯಕ್ಷರಾದ ಶ್ರೀ ಟಿ. ಪ್ರಸಾದ್, ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಪೆರ್ಲದ ಅಧ್ಯಾಪಕರಾದ ಡಾ. ಸತೀಶ್ ಪುಣಿoಚಿತ್ತಾಯ ಮತ್ತಿತರರು ಭಾಗವಹಿಸಲಿದ್ದಾರೆ.