ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಬ್ಯಾರಿ ಮಹಿಳಾ ಕವಿಗೋಷ್ಠಿಯು ದಿನಾಂಕ 02-03-2024 ರಂದು ಮಂಗಳೂರಿನ ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೇಖಕಿ ಝುಲೇಖಾ ಮುಲ್ತಾಝ್ “ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಮಾತೃಭಾಷೆಯನ್ನು ಮರೆಯದೆ ಮಕ್ಕಳಿಗೆ ಪರಿಚಯಿಸಿಕೊಡುವ ಜವಾಬ್ದಾರಿ ತಾಯಂದಿರದ್ದಾಗಿದೆ. ಮಕ್ಕಳಿಗೆ ಮಾತೃಭಾಷೆಯ ಹಿರಿಮೆ ಮತ್ತು ಮಹಿಮೆಯನ್ನು ತಿಳಿಹೇಳಬೇಕಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಉದ್ಯೋಗದ ಭಾಷೆಯಾಗಿದ್ದರೂ ಕೂಡ ಮಾತೃಭಾಷೆಯಲ್ಲಿ ಮಾತನಾಡಬೇಕು ಹಾಗೂ ಬರೆಯಬೇಕು. ಆಗ ಮಾತ್ರ ನಮ್ಮ ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ. ಬ್ಯಾರಿ ಭಾಷೆಯ ಅಳಿವು, ಉಳಿವು ಕೂಡ ತಾಯಂದಿರ ಕೈಯಲ್ಲಿದೆ.” ಎಂದು ಝುಲೇಖಾ ಮುಮಾಝ್ ಹೇಳಿದರು.
ಲೇಖಕಿ ಆಯಿಶಾ ಯು.ಕೆ. ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ ಕಾಮತ್ ಸ್ವಾಗತಿಸಿ, ಲೇಖಕಿ ಸಾರಾ ಅಲಿ ಪೆರ್ಲಡ್ಕ ಕಾರ್ಯಕ್ರಮ ನಿರೂಪಿಸಿ, ಕಚೇರಿ ಸಿಬ್ಬಂದಿ ರಂಝೀನಾ ವಂದಿಸಿದರು.
ಕವಯತ್ರಿಗಳಾದ ಝುಲೇಖಾ ಮುಲ್ತಾಝ್, ಆಯಿಶಾ ಯು. ಕೆ., ಮರಿಯಮ್ ಪಕ್ಕಲಡ್ಕ, ಆಯಿಶಾ ಪೆರ್ನೆ, ಶಮೀಮಾ ಕುತ್ತಾರ್, ರಮೀಝಾ ಎಂಬಿ, ಸಾರಾ ಅಲಿ ಪರ್ಲಡ್ಕ, ಅಸ್ಮತ್ ವಗ್ಗ, ತಾಹಿರಾ ಸಿರಾಜ್, ಅಸ್ಮತ್ ವಗ್ಗ, ನಝತುನ್ನೀಸ ಲೈಝ್, ರೈಹಾನಾ ವಿ.ಕೆ., ರಹ್ಮತ್ ಪುತ್ತೂರು, ತನ್ಸೀರಾ ಆತೂರು, ಮುಝಾಹಿದಾ, ನಸೀಬಾ ಗಡಿಯಾರ್, ಮುನೀರಾ ತೊಕ್ಕೊಟ್ಟು, ಸಾರಾ ಮಸ್ಕುರುನ್ನಿಸಾ, ಶಾಹಿದಾ ಮೈಕಾಲ, ಸಲ್ಮಾ ಮೈಕಾಲ, ಶಿಫಾ ಕೆ. ಎಂ. ಉಳ್ಳಾಲ, ಹುದಾ ಉಳ್ಳಾಲ, ಡಾ. ಜುವೈರಿಯ ಮುಫೀದಾ, ಫೌಝಿಯಾ ಹರ್ಷದ್ ಹಾಗೂ ಉಮೈರತ್ ಕುಮೇರ್ ಕವನಗಳನ್ನು ವಾಚಿಸಿದರು
Subscribe to Updates
Get the latest creative news from FooBar about art, design and business.
Previous Articleವಾರ್ಷಿಕ ತರಬೇತಿ ಶಿಬಿರದ ಸಮಾರೋಪ