ಮಂಜನಾಡಿ : ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದಮರೊ ಕೂಟ) ದೇರಳಕಟ್ಟೆ ಇದರ ವತಿಯಿಂದ ಬ್ಯಾರಿ ಸಾಹಿತ್ಯ ಕಾರ್ಯಾಗಾರ ಮತ್ತು ಕವಿಗೋಷ್ಠಿಯು ದಿನಾಂಕ 18 ಫೆಬ್ರವರಿ 2025ರ ಮಂಗಳವಾರದಂದು ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿರುವ ಶರಫುಲ್ ಉಲಮಾ ಅಡಿಟೋರಿಯಂನಲ್ಲಿ ನಡೆಯಿತು.
ಅಲ್ ಮದೀನಾದ ಮುದರ್ರಿಸ್ ಮುಹಮ್ಮದ್ ಕುಂಞ ಅಮ್ಮದಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಮೇಲೆನೆಯ ಅಧ್ಯಕ್ಷ ವಿ.ಇಬ್ರಾಹೀಂ ನಡುಪದವು ಮಾತನಾಡಿ “ಮೇಲ್ತೆನೆಯು ಯುವ ಬ್ಯಾರಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ಭಾಷಾಭಿಮಾನ ಹುಟ್ಟಿಸಲು ಪ್ರಯತ್ನಿಸುತ್ತಿದೆ” ಎಂದರು.
ಅತಿಥಿಗಳಾಗಿ ಅಲ್ ಮದೀನಾ ದಅವಾ ಕಾಲೇಜಿನ ಪ್ರಾಂಶುಪಾಲರಾದ ಸೈಯ್ಯದ್ ಉವೈಸ್ ಅಸ್ಸಖಾಫ್, ಅಲ್ ಮದೀನಾ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಭಾಗವಹಿಸಿದ್ದರು. ಪತ್ರಕರ್ತ ಹಂಝ ಮಲಾರ್ ಸಾಹಿತ್ಯ ಕಾರ್ಯಾಗಾರ ನಡೆಸಿದರು.
ಕವಿಗಳಾದ ಬಶೀರ್ ಅಹ್ಮದ್ ಕಿನ್ಯ, ಮುಆದ್ ಜಿ. ಎಂ., ಅಬ್ದುಲ್ ರಝಾಕ್ ಮಾಸ್ಟರ್ ನಾವೂರು, ಎ.ಕೆ.ಮುಡಿಪು, ಅಶೀರುದ್ದೀನ್ ಸಾರ್ತಬೈಲ್, ಸಿ.ಎಂ.ಶರೀಫ್ ಪಟ್ಟೋರಿ, ಅಬೂಬಕರ್ ಎಚ್.ಕಲ್., ಬಿ.ಎಂ. ಕಿನ್ಯ ಕವನ ವಾಚಿಸಿದರು.
ಮೇಲ್ತೆನೆಯ ಮುಹಮ್ಮದ್ ಬಾಷಾ ನಾಟೆಕಲ್, ಅಬ್ದುಲ್ ಬಶೀರ್ ಕಲ್ಕಟ್ಟ, ಯೂಸುಫ್ ವಕ್ತಾರ್ ಹಾಗೂ ಜಲೀಲ್ ಮೋಂಟುಗೋಳಿ, ಇಸ್ಮಾಯೀಲ್ ಮಾಸ್ಟರ್ ಮೋಂಟುಗೋಳಿ, ಬಾತಿಷ್ ಗೋಳ್ತಮಜಲು, ಫೈಝ್ ವಿಟ್ಲ ಭಾಗವಹಿಸಿದ್ದರು. ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಇಸ್ಮಾಯೀಲ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ಇಬ್ರಾಹೀಂ ಮುದುಂಗಾರುಕಟ್ಟೆ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪುರಸ್ಕಾರಗಳ ಪ್ರದಾನ ಸಮಾರಂಭ