ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ಆಯೋಜಿಸಿದ ‘ಕ್ಯಾನ್ ಲಿಟೆರಾತಿ ಫೆಸ್ಟ್ 2024’ 5 ಮತ್ತು 6 ಅಕ್ಟೋಬರ್ 2024ರಂದು ಮಂಗಳೂರಿನ ಟಿ. ವಿ. ರಮಣ ಪೈ ಕನ್ವೆನ್ಷನ್ ಸೆಂಟರ್ ಇಲ್ಲಿ ನಡೆಯಿತು. ಈ ಎರಡು ದಿನಗಳ ಈ ಸಾಹಿತ್ಯೋತ್ಸವದಲ್ಲಿ ಮಂಗಳೂರು, ಹೊನ್ನಾವರ, ಬಂಟ್ವಾಳ, ಕಾರ್ಕಳ, ಉಡುಪಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮವು ಎಂ. ಆರ್. ಪಿ. ಎಲ್. ಮತ್ತು ಶ್ರೀ ಗಣೇಶ್ ಎಲೆಕ್ಟ್ರಿಕಲ್ಸ್ ಇವರ ಮುಖ್ಯ ಪ್ರಾಯೋಜಕತ್ವದಲ್ಲಿ ಹಾಗೂ ಡಿ. ಟಿ. ಡಿ. ಸಿ. ಕೊರಿಯರ್ , ಹಾಂಗ್ಯೋ ಐಸ್ ಕ್ರೀಮ್, ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್, ರೋಹನ್ ಕಾರ್ಪೊರೇಷನ್, ಮಹೇಶ್ ಎಂಜಿನಿಯರಿಂಗ್, ಐ ಆಮ್ ಜಯಲಕ್ಷ್ಮೀ ಮತ್ತು ಶ್ರೀ ಗಜಾನನ ಮೆಷಿನ್ ವರ್ಕ್ಸ್ ಇವರ ಸಹಪ್ರಾಯೋಜಕದಲ್ಲಿ ಯಶಸ್ವಿಯಾಗಿ ನೆರವೇರಿತು
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ. ಡಿ. ವಾಸುದೇವ ಕಾಮತ್, ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ್ ಭಟ್, ಅಸೋಸಿಯೇಷನ್ ಇದರ ಸದಸ್ಯರಾದ ಶ್ರೀ ಯೋಗೇಶ್ ಕಾಮತ್, ಶ್ರೀ ನರೇಶ್ ಶೆಣೈ, ಶ್ರೀಮತಿ ಅಶ್ವಿನಿ ಕಾಮತ್ ಮತ್ತು ಶ್ರೀ ಬಸ್ತಿ ಪುರುಷೋತ್ತಮ ಶೆಣೈ ಉಪಸ್ಥಿತರಿದ್ದರು. ಪದವಿ ಕಾಲೇಜಿನ ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್ , ಪಬ್ಲಿಕ್ ರಿಲೇಶನ್ ಆಫೀಸರ್ ಶ್ರೀಮತಿ ಉಜ್ವಲ್ ಮಲ್ಯ ಮತ್ತು ಕೆನರಾ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ಇಂದುಮತಿ, ಶ್ರೀಮತಿ ಲಲನಾ ಶೆಣೈ, ಶ್ರೀಮತಿ ಕವಿತಾ ಮೌರ್ಯ ಹಾಗೂ ಶ್ರೀಮತಿ ಸುರೇಖಾ ಭಟ್ ಉಪಸ್ಥಿತರಿದ್ದರು. ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್‌ನ್ಯಾಶನಲ್ ಶಾಲೆಯ ನಿರ್ದೇಶಕಿ ಅಂಜನಾ ಕಾಮತ್ ನೇತೃತ್ವದ ತಂಡ ಕಾರ್ಯಕ್ರಮವನ್ನು ಸಂಯೋಜಿಸಿತ್ತು.
ಉತ್ಸವದ ವಿಶೇಷ ಆಕರ್ಷಣೆಯಾಗಿ ಕೆನರಾ ಸಾಂಸ್ಕೃತಿಕ ಅಕಾಡೆಮಿ ಸಂಯೋಜಕರಾದ ಶ್ರೀ ಉಜ್ವಲ್ ಯು. ವಿ. ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ‘ಮೋಗ್ಲಿ’ ಮತ್ತು “ಪುರುಸನ ಪುಗ್ಗೆ” ಎಂಬ ನಾಟಕಗಳು ಅಮೋಘವಾಗಿ ಮೂಡಿಬಂದವು.
‘ಅಮರ್ ಚಿತ್ರ ಕಥೆ’ ಮತ್ತು ‘ಟಿಂಕಲ್’ ತಂಡವು ತಮ್ಮ ಪ್ರಸಿದ್ಧ ಕಥೆಗಳು ಮತ್ತು ಚಿತ್ರಗಳ ಮೂಲಕ ಮಕ್ಕಳನ್ನು ಮೆಚ್ಚಿಸಿದವು. ಮಾನ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಚೆನ್ನೈಯಿಂದ ವಿಕ್ರಮ್ ಶ್ರೀಧರ್, ಹೈದರಾಬಾದ್‌ನ ‘ಟಾಕಿಂಗ್ ಟರ್ಟಲ್’ ಇಲ್ಲಿನ ಶ್ರೀದೇವಿ ಸುನಿಲ್ ಹಾಗೂ ‘ಪೇಪರ್ ರಾಕೆಟ್’ ಸಂಸ್ಥಾಪಕಿ ರೂಪಶ್ರೀ ಶೆಣೈ ಭಾಗವಹಿಸಿದರು. ಸೃಜನಶೀಲ ಬರವಣಿಗೆಯ ಅಧಿವೇಶನಗಳನ್ನು ಸುನೀತಾ ಪೆರೇರಾ ಮತ್ತು ಬೆಂಜಿಟಾ ನಡೆಸಿದರು. ‘ಡಿಸ್ಟಿಂಗ್ವಿಶ್ಡ್ ಟೋಸ್ಟ್ ಮಾಸ್ಟರ್’ ದಿವ್ಯಶ್ರೀ ಗಟ್ಟಿ ಇವರು ಪ್ಯಾನೆಲ್ ಚರ್ಚೆಯನ್ನು ನಿರ್ವಹಿಸಿದರು. ಡಿ. ಟಿ. ಎಂ. ನಿವೇದಿತಾ ಮಿರಾಜ್ಕರ್, ವೀರ ಕಟಿಪಟಿಯಾ, ಅಶ್ವಿನಿ ಶೆಣೈ, ತುಂಜಾ ಮಾಬೆನ್, ಡಾ. ಚಾಂದಿನಿ ಶೆಟ್ಟಿ, ಶೈವಿ ಸಾಲಿಯಾನ್, ಕೃಪಾಂಜಲಿ ಟೆಲಿಸ್ ನಾಯಕ್, ಮತ್ತು ಜ್ಯೋತಿಕಾ ಶೆಟ್ಟಿ ಇತರ ಮುಖ್ಯ ಭಾಷಣಕಾರರಾಗಿದ್ದು, 4 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿವಿಧ ಅಧಿವೇಶನಗಳನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳು ಸೃಜನಾತ್ಮಕ ಚಟುವಟಿಕೆಗಳಾದ ಹಕ್ಕಿಗಳ ಆಹಾರ ತಯಾರಿಕೆ, ಕ್ಯಾನ್‌ವಾಸ್ ಪೇಂಟಿಂಗ್, ಶಿಲ್ಪಕಲೆ, ಆಭರಣ ತಯಾರಿಕೆ, ಗಾಳಿಪಟ ಮತ್ತು ದೀಪಮಾಲೆಗಳ ತಯಾರಿಕೆ, ಪದಪದಗಳು, ಮತ್ತು ಪದಗಳ ಹುಡುಕಾಟಗಳಂತಹ ಕ್ರಿಯಾಶೀಲ ಕಲೆ ಹಾಗೂ ಕಾರ್ಯಗಳನ್ನು ಆನಂದಿಸಿದರು. ಮ್ಯೂಸಿಯಂ ಭೇಟಿ ವಿದ್ಯಾರ್ಥಿಗಳಿಗೆ ಸಂವಹನಾತ್ಮಕವಾಗಿ ಕಲಿಯುವ ಅವಕಾಶವನ್ನು ನೀಡಿದವು. ಕಲಾ ಪ್ರದರ್ಶನವು ಯುವ ಪಾಲುಗಾರರ ಸೃಜನಶೀಲತೆಯನ್ನು ತೋರಿಸಿತು ಮತ್ತು ಪುಸ್ತಕ ಮೇಳವು ಮಕ್ಕಳು ಹಾಗೂ ಪಾಲಕರಿಗೆ ವಿಶೇಷ ಪುಸ್ತಕಗಳ ಸಮರ್ಪಣೆಯನ್ನು ಒದಗಿಸಿತು.
ಕಾರ್ಯಕ್ರಮವು ದಸರಾ ಹಬ್ಬದ ಸಂಭ್ರಮದಂತೆ ಮಕ್ಕಳಿಗೆ ವಿಶೇಷವಾಗಿ ಹುಲಿ ಕುಣಿತ ತಂಡದ ಪ್ರದರ್ಶನದೊಂದಿಗೆ ಕೊನೆಗೊಂಡಿತು. ಕ್ಯಾನ್ ಲಿಟೆರತಿ ಫೆಸ್ಟ್ 2024 ಯಶಸ್ವಿಯಾಗಿ ಸಾಂಸ್ಕೃತಿಕ ಹಾಗೂ ಸಾಹಿತ್ಯಾಸಕ್ತಿಯನ್ನು ಮಂಗಳೂರು ಮಕ್ಕಳಲ್ಲಿ ಉತ್ತೇಜಿಸಿತು.