ಮಣಿಪಾಲ : ಕೆನರಾ ಬ್ಯಾಂಕ್‌ನ 118ನೇ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಮಣಿಪಾಲ ಅನಂತ ನಗರದಲ್ಲಿರುವ ಕೆನರಾ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ (ಸಿಐಬಿಎಂ) ಮತ್ತು ಉಡುಪಿ ಆರ್ಟಿಸ್ಟ್ಸ್ ಫೋರಂ ಸಹಯೋಗದಲ್ಲಿ ಮಣಿಪಾಲದ ಸಿಐಬಿಎಂ ಸಂಸ್ಥೆಯಲ್ಲಿ ದಿನಾಂಕ 19-11-2023ರಂದು ಬೆಳಗ್ಗೆ 9.30ರಿಂದ 11.30ರವರೆಗೆ 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಪರಿಸರ ರಕ್ಷಣೆ’, ‘ಆದರ್ಶ ಗ್ರಾಮ’, ‘ರಾಷ್ಟ್ರೀಯ ಹಬ್ಬಗಳು’ ಮತ್ತು 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಆದರ್ಶ ನಗರ’, ‘ಕರಕುಶಲ/ಗುಡಿ ಕೈಗಾರಿಕೆ’, ‘ಜಲಚರ (ಸಾಗರ) ಸಂರಕ್ಷಣೆ’ ಎಂಬ ವಿಷಯಗಳಿದ್ದು, ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಚಿತ್ರ ಬಿಡಿಸಬೇಕು. ಡ್ರಾಯಿಂಟ್ ಶೀಟ್ ನೀಡಲಾಗುತ್ತದೆ. ಉಳಿದ ಪರಿಕರಗಳನ್ನು ಮತ್ತು ಶಾಲಾ ಗುರುತಿನ ಚೀಟಿಯನ್ನು ಎಲ್ಲಾ ವಿದ್ಯಾರ್ಥಿಗಳೂ ತಾವೇ ತರಬೇಕು.