ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 22 ಆಗಸ್ಟ್ 2025ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಪ್ರದರ್ಶನವನ್ನು ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 6-00 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕುಮಾರಿ ಚಾರ್ವಿ ಆರ್. ಸರಳಾಯ ಇವರ ಹಾಡುಗಾರಿಕೆಗೆ ವಯೋಲಿನ್ ನಲ್ಲಿ ಕುಮಾರಿ ಇಂಚರ ಎನ್. ಮತ್ತು ಮೃದಂಗದಲ್ಲಿ ಶ್ರೀ ಶಮಿತ್ ಕಲ್ಕೂರ್ ಸಹಕರಿಸಲಿದ್ದಾರೆ.
ರಾತ್ರಿ ಗಂಟೆ 7-30ರಿಂದ ಯಕ್ಷಾರಾಧನಾ ಕಲಾ ಕೇಂದ್ರ (ರಿ) ಉರ್ವ ಮಾರ್ಕೆಟ್ ಮಂಗಳೂರಿನ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಮತ್ತು ಶಿಷ್ಯವೃಂದ ಪ್ರಸ್ತುತಪಡಿಸುವ ಆಗರಿ ಶ್ರೀನಿವಾಸ ಭಾಗವತರು ರಚಿಸಿರುವ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ನಿರ್ದೆಶನದಲ್ಲಿ ‘ಶಾಂಭವಿ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಶ್ರೀ ಶಿತಿಕಂಠ ಭಟ್ ಉಜರೆ, ಶ್ರೀ ಲವಕುಮಾರ ಐಲ, ಶ್ರೀ ವೆಂಕಟೇಶ್ ಕಾರ್ಕಳ ಹಾಗೂ ಮುಮ್ಮೇಳದಲ್ಲಿ ದೇವೇಂದ್ರ : ಸಮಿಕ್ಷಾ ಆಚಾರ್ಯ, ಬಲಗಳು : ಆದಿ ಸ್ವರೂಪ ಅಕ್ಷಯ್ ಆಚಾರ್ಯ, ಸಾಕ್ಷಿ ಶೇಷಾದ್ರಿ ಸಾಶ್ವತ್ ಶೇಷಾದ್ರಿ, ಶುಂಭ : ಪ್ರತೀಕ್ ಜಗತಾಪ್, ನಿಶುಂಭ: ಸೂರಜ್ ಸಾಮಗ, ಶಾಂಭವಿ : ವಿದುಷಿ ಸುಮಂಗಲಾ ರತ್ನಾಕರ್ ರಾವ್, ಚಂಡ : ಸನತ್‌ಕುಮಾರ್, ಮುಂಡ : ವೈಶಾಖ್ ರಾವ್, ಸುಗ್ರೀವ: ಶ್ರೀಮತಿ ಸುಮಾಡ್ಕರ್, ಧೂಮ್ರಾಕ್ಷ: ಸ್ವಸ್ತಿಕ್ ರಾವ್, ಕಾಳಿ : ಅಕ್ಷಯ್ ಆಚಾರ್ಯ, ರಕ್ತಬೀಜ : ಅನಂತ ಕೃಷ್ಣ ಅಜ್ಜಕಾನ, ಸಪ್ತಮಾತೃಕೆಯರು : ಸಾಕ್ಷಿ, ಸಾಶ್ವತ್, ಅಕ್ಷಯ್, ಬೀಜಾದಿಗಳು : ಸ್ವಸ್ತಿಕ್, ಆದಿ, ಪ್ರಸನ್ನ, ಜನನ್, ರಕ್ತೇಶ್ವರಿ : ವೈಶಾಖ್ ಸಹಕರಿಸಲಿದ್ದಾರೆ.