ಮಂಗಳೂರು : ಸ್ಪೀಕ್ ಮಕೇ ಎನ್.ಐ.ಟಿ.ಕೆ. ಇವರು ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ಎನ್.ಐ.ಟಿ.ಕೆ.ಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಿದುಷಿ ಅಮೃತ ಮುರಳಿ ಇವರ ಹಾಡುಗಾರಿಕೆಗೆ ವಿದ್ವಾನ್ ಬಿ.ಎಸ್. ಪ್ರಶಾಂತ್ ಇವರು ಮೃದಂಗದಲ್ಲಿ ಹಾಗೂ ವಿದುಷಿ ಅದಿತಿ ಕೃಷ್ಣಪ್ರಕಾಶ್ ಇವರು ವಯೋಲಿನ್ ನಲ್ಲಿ ಸಾಥ್ ನೀಡಲಿದ್ದಾರೆ.