ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭ ದಿನಾಂಕ 01-10-2023ನೇ ಭಾನುವಾರ ಬೆಳಿಗ್ಗೆ ಗಂಟೆ 11.00ಕ್ಕೆ ನಡೆಯಲಿದೆ.
ಮಂಗಳೂರಿನ ಬಳ್ಳಾಲ್‌ಬಾಗಿನ ಲೋಕಯ್ಯ ಶೆಟ್ಟಿ ರಸ್ತೆಯಲ್ಲಿರುವ ಶ್ರೀ ದುರ್ಗಾ ಕಾಂಪ್ಲೆಕ್ಸ್‌ನ 3ನೇ ಮಹಡಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಗೌರವಾನ್ವಿತ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ವಹಿಸಲಿರುವರು. ಮಂಗಳೂರಿನ ಸಿಮ್ ಟೆಕ್ನಾಲಜಿಸ್ ಗ್ರೂಪೀನ ಆಡಳಿತ ನಿರ್ದೇಶಕರಾದ ಶ್ರೀ ನವೀನ್ ಕಿಲ್ಲೆ ದೀಪ ಪ್ರಜ್ವಲನ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಕೆ.ಶೆಟ್ಟಿ, ಮಂಗಳೂರಿನ ಸಿಂಫನಿ ಸಂಗೀತೋಪಕರಣ ಮಳಿಗೆ ಇದರ ಮಾಲಕರಾದ ಶ್ರೀ ಲಾಯ್ ನೊರೊನ್ಹಾ, ಮಂಗಳೂರಿನ ಕರ್ನಾಟಕ ಸಂಗೀತ ಕಲಾವಿದರಾದ ವಿದ್ವಾನ್ ಅನೀಶ್ ವಿ.ಭಟ್ ಭಾಗವಹಿಸಲಿದ್ದಾರೆ.
ಇದೇ ಸ್ಥಳದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಗಂಟೆ 11.00 ರಿಂದ 12.00ರ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ನಡೆಯಲಿದೆ. ಜೊತೆಗೆ ಸಂಗೀತ ಕಲಿಕೆಗೆ ಪೂರಕವಾದ ಯೋಗ, ಪ್ರಾಣಾಯಾಮ, ಧ್ಯಾನ, ಭಗವದ್ಗೀತೆ, ಭಜನೆ, ದೇಶಭಕ್ತಿ ಗೀತೆಗಳು ಹಾಗೂ ಪುರಾಣ ಕಥೆಗಳನ್ನು ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಇದರ ಕಾರ್ಯದರ್ಶಿಯಾದ ಪಿ.ನಿತ್ಯಾನಂದ ರಾವ್ – 974279266 ಇವರನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
ಮಂಗಳೂರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭ | ಅಕ್ಟೋಬರ್ 1ರಂದು
No Comments1 Min Read