Subscribe to Updates

    Get the latest creative news from FooBar about art, design and business.

    What's Hot

    ಕವನ | ಅನುಬಂಧ

    June 17, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನ | ಜೂನ್ 19

    June 17, 2025

    ಇಂದ್ರಾಳಿ ಯಕ್ಷಗಾನ ಕೇಂದ್ರದವರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ಮಂಗಳೂರಿನಲ್ಲಿ ಶುಭಾರಂಭ
    Music

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ಮಂಗಳೂರಿನಲ್ಲಿ ಶುಭಾರಂಭ

    October 4, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭವವು ದಿನಾಂಕ 1-10-2023ರಂದು ಮಂಗಳೂರಿನ ಬಳ್ಳಾಲ್‌ಬಾಗಿನಲ್ಲಿರುವ ಲೋಕಯ್ಯ ಶೆಟ್ಟಿ ರಸ್ತೆಯಲ್ಲಿನ ಶ್ರೀ ದುರ್ಗಾ ಕಾಂಪ್ಲೆಕ್ಸ್, 3ನೇ ಮಹಡಿಯಲ್ಲಿ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು “ಭಾರತೀಯ ಕಲೆಗಳು ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಇಂತಹ ಕಲೆಗಳನ್ನು ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ” ಎಂದು ತಿಳಿಸಿದರು.

    ಸಿಮ್ ಟೆಕ್ನಾಲಜೀಸ್ ಗ್ರೂಪಿನ ಮಾಲೀಕರಾದ ನವೀನ್ ಕಿಲ್ಲೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ, ಸಿಂಫನಿ ಸಂಸ್ಥೆಯ ಮಾಲೀಕರಾದ ಶ್ರೀ ಲಾಯ್ ನೊರೊನ್ಹಾ, ಸಂಗೀತ ಗುರುಗಳೂ, ಕಲಾವಿದರೂ ಆದ ವಿದ್ವಾನ್ ಅನೀಶ್ ವಿ. ಭಟ್, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಪ್ರಸಿದ್ಧ ನಾಗಸ್ವರ ವಿದ್ವಾಂಸ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಬಾಲಕೃಷ್ಣ ಸರಳಾಯ ಕಾರ್ಯಕ್ರಮ ನಿರೂಪಿಸಿ, ಶೋಭಿತ ಭಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನು ಪ್ರಾರ್ಥನೆಯ ರೂಪದಲ್ಲಿ ಪ್ರಸ್ತುತಪಡಿಸಿದರು.

    ಹೆಚ್ಚಿನ ಮಾಹಿತಿಗಾಗಿ ಪಿ.ನಿತ್ಯಾನಂದ ರಾವ್ -9742792669

    Share. Facebook Twitter Pinterest LinkedIn Tumblr WhatsApp Email
    Previous Articleದಕ್ಷಿಣ ಕೊರಿಯಾದ ‘ಸಾರಂಗ ಫೆಸ್ಟಿವಲ್’ನಲ್ಲಿ ಗಾನ ನೃತ್ಯ ಅಕಾಡೆಮಿ | ಅಕ್ಟೋಬರ್ 6ರಿಂದ 12ರವರೆಗೆ
    Next Article ‘ಬಂಗಾರ್ ಪರ್ಬದ ಸರಣಿ ವೈಭವೊ-7’ – ಮಹಿಳೆಯರಿಂದ ‘ಆಟ-ಕೂಟ–ನಲಿಕೆ’
    roovari

    Add Comment Cancel Reply


    Related Posts

    ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ

    June 17, 2025

    ಬಾಸುಮ ಕೊಡಗು ಇವರ ಕವನ ಸಂಕಲನ ಲೋಕಾರ್ಪಣೆ ಸಮಾರಂಭ | ಜೂನ್ 22

    June 17, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ರಾಗರತ್ನಮಾಲಿಕೆ – 38ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ | ಜೂನ್ 22

    June 17, 2025

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿ | ಜೂನ್ 21

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.