ಬೆಂಗಳೂರು : ಬೆಂಗಳೂರಿನ ಸಂಜಯನಗರದ ರಾಜಮಹಲ್ ವಿಲಾಸ ಸಂಗೀತ ಸಭಾ (ರಿ.) ಪ್ರಸ್ತುತ ಪಡಿಸುವ ಸೆಪ್ಟೆಂಬರ್ ತಿಂಗಳ ಕರ್ನಾಟಕ ಸಂಗೀತ ಕಛೇರಿಯು ದಿನಾಂಕ 02-09-2023 ರಂದು ವಿನಾಯಕ ದೇವಸ್ಥಾನದ ಗಾಯತ್ರಿ ಪರಿಷತ್ತಿನ ಶ್ರೀ ಶಂಕರ ಅಧ್ಯಯನ ಕೇಂದ್ರದಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮದ ಹಾಡುಗಾರಿಕೆಯಲ್ಲಿ ವಿದುಷಿ ಮಾಧುರಿ ಕೌಶಿಕ್, ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಪುತ್ತೂರ್, ಪಿಟೀಲಿನಲ್ಲಿ ವಿದ್ವಾನ್ ಕಾರ್ತಿಕೇಯ ಆರ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜಮಹಲ್ ವಿಲಾಸ ಸಂಗೀತ ಸಭಾ ತಮ್ಮೆಲ್ಲರಿಗೂ ಆದರದ ಸ್ವಾಗತ ಬಯಸಿದೆ.

