ಬೆಂಗಳೂರು : ಎಸ್.ವಿ.ಎನ್. ಮ್ಯೂಜಿಕ್ ಅಕಾಡೆಮಿ, ಎಂ.ಡಿ.ಎನ್.ಡಿ. ಮತ್ತು ದೊಸಾ ಸ್ಟುಡಿಯೋ ಇವರ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆಯನ್ನು ದಿನಾಂಕ 21 ಮತ್ತು 22 ಜೂನ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 21 ಜೂನ್ 2025ರಂದು ಜಯಂತಿ ಕುಮಾರೇಶ್ ಇವರ ವೀಣಾ ವಾದನಕ್ಕೆ ಅಂಬಿ ಸುಬ್ರಮಣ್ಯಂ ಇವರು ವಯೋಲಿನ್, ಕೆ.ಯು. ಜಯಚಂದ್ರ ರಾವ್ ಇವರು ಮೃದಂಗ ಮತ್ತು ಗಿರಿಧರ್ ಉಡುಪ ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 22 ಜೂನ್ 2025ರಂದು ತ್ರಿಚೂರ್ ಬ್ರದರ್ಸ್ ಇವರ ಹಾಡುಗಾರಿಕೆ ಎಸ್. ಜನಾರ್ದನ್ ಇವರು ವಯೋಲಿನ್, ತ್ರಿಚೂರ್ ಆರ್. ಮೋಹನ್ ಇವರು ಮೃದಂಗ ಮತ್ತು ಓಂಕಾರ್ ರಾವ್ ಜಿ. ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.