ಮಂಗಳೂರು : ಚಕ್ರಪಾಣಿ ನೃತ್ಯ ಕಲಾಕೇಂದ್ರ (ರಿ.) ಅತ್ತಾವರ ಮಂಗಳೂರು ಇದರ ವತಿಯಿಂದ ಗುರುಪೂರ್ಣಿಮೆ ಹಬ್ಬ ಹಾಗೂ ಮಾತಾ ಪಿತರ ಪಾದಪೂಜೆಯು ಚಕ್ರಪಾಣಿ ಕಲಾಮಂಟಪದಲ್ಲಿ ದಿನಾಂಕ : 09-07-2023ರಂದು ಜರುಗಿತು. ಚಕ್ರಪಾಣಿ ದೇಗುಲದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ತಾಯಿ ಮತ್ತು ತಂದೆಯರ ಪಾದಪೂಜೆ ನಡೆಯಿತು.
“ಮಕ್ಕಳಿಗೆ ಶಾಲೆಯಲ್ಲಿ ಸಿಗುವ ಶಿಕ್ಷಣ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆಯೋ ಅಷ್ಟೇ ಮೌಲ್ಯ ಶಿಕ್ಷಣ ಕೂಡ ಮಕ್ಕಳ ಬೆಳವಣಿಗೆಗೆ ಕಾರಣವಾಗುತ್ತದೆ. ಮಕ್ಕಳು ಮನೆಯ ವಾತಾವರಣ, ಶಿಸ್ತು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಜೀವನದ ಗುರಿಯನ್ನು ಅತೀ ಸುಲಭದಲ್ಲಿ ತಲುಪಲು ಸಾಧ್ಯ.” ಎಂದು ಶಿಕ್ಷಣ ತಜ್ಞೆ ಮತ್ತು ಆಪ್ತ ಸಮಾಲೋಚಕಿ ಶ್ರೀಮತಿ ಸುಮತಿ ಪೈ ಹೇಳಿದರು. ಈ ಸಂದರ್ಭದಲ್ಲಿ ಶ್ರೀಮತಿ ಮಯೂರಿ ಅತ್ತಾವರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಸುರೇಶ್ ಅತ್ತಾವರ್ ಇವರು ಸ್ವಾಗತಿಸಿ, ಶ್ರೀಮತಿ ಮಲ್ಲಿಕಾ ಸುರೇಶ್ ವಂದನಾರ್ಪಣೆಗೈದರು.