ಸುಳ್ಯ : ಸುಳ್ಯದ ಚಂದನ ಸಾಹಿತ್ಯ ವೇದಿಕೆಯ 20ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23 ಮಾರ್ಚ್ 2025ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಯಂದಲ್ಲಿ ಸಾಹಿತಿ, ಅಂಕಣಕಾರ, ಪತ್ರಕರ್ತ ವಿರಾಜ್ ಅಡೂರು ಇವರನ್ನು ಸಾಹಿತಿ ಎಚ್. ಭೀಮ್. ರಾವ್ ವಾಸ್ಟರ್ ಕೋಡಿಹಾಳ ನೇತೃತ್ವದಲ್ಲಿ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನಿಸಲಾಯಿತು.
ವಿರಾಜ್ ಅಡೂರು ಇವರು ಸಾಹಿತ್ಯ, ಸಂಘಟನೆ, ಸಾಮಾಜಿಕ ಮುಖಂಡರಾಗಿದ್ದು, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರಿನ ‘ಸ್ಪಂದನ ಸಿರಿ’ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಚಂದನ ಸಾಹಿತ್ಯ’ವೇದಿಕೆಯ ಅಧ್ಯಕ್ಷ ಎಚ್. ಭೀಮ್. ರಾವ್ ವಾಸ್ಟರ್ ಕೋಡಿಹಾಳ, ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಮೋಹನ ನಂಗಾರು, ಚೆನ್ನಕೇಶವ ಜಾಲ್ಸೂರು, ಪಿ ವೆಂಕಟೇಶ್ ಬಾಗೇವಾಡ, ನವೀನ್ ಚಾತುಬಾಯಿ, ಸಲೀಂ ಅನಾರ್ಕಲಿ ಮೊದಲಾದವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Previous Articleಡಾ. ಪಾದೂರು ಗುರುರಾಜ್ ಭಟ್ ಜನ್ಮ ಶತಮಾನೋತ್ಸವ -2025 | ಮಾರ್ಚ್ 28