ಬಂಟ್ವಾಳ : ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ಇದರ ಸದಸ್ಯೆಯರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಚಂದ್ರಹಾಸ ಚರಿತ್ರೆ’ ಎಂಬ ಯಕ್ಷಗಾನ ತಾಳಮದ್ದಳೆಯು ದಿನಾಂಕ 08-09-2023ರಂದು ಮಧ್ಯಾಹ್ನ ಗಂಟೆ 2ರಿಂದ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಹರೀಶ ಬಳಂತಿಮುಗರು, ಚೆಂಡೆಯಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು ಮತ್ತು ಮದ್ದಳೆಯಲ್ಲಿ ಮಾ.ಸಮರ್ಥ ಉಡುಪ. ಮುಮ್ಮೇಳದಲ್ಲಿ ಚಂದ್ರಹಾಸನಾಗಿ ಶ್ರೀಮತಿ ರಾಜಶ್ರೀ ನಾವಡ, ಕಪ್ಪದ ದೂತನಾಗಿ ಶ್ರೀಮತಿ ಸುಲೋಚನ ನಾವಡ, ದುಷ್ಟಬುದ್ಧಿಯಾಗಿ ಶ್ರೀಮತಿ ಸರಸ್ವತಿ ಹೊಳ್ಳ, ವಿಷಯೆಯಾಗಿ ಶ್ರೀಮತಿ ಶ್ರೀಲತಾ ನಾವಡ, ಕುಳಿಂದ ಮತ್ತು ಕಾಳಿಕಾದೇವಿಯಾಗಿ ಶ್ರೀಮತಿ ಜಯಲಕ್ಷ್ಮೀ ಮಯ್ಯ ಮತ್ತು ಮದನನಾಗಿ ಶ್ರೀಮತಿ ಜಯಲಕ್ಷ್ಮೀ ಕಾರಂತ್ ಸಹಕರಿಸಲಿದ್ದಾರೆ.