ಮಂಗಳೂರು : ಕರಾವಳಿ ಲೇಖಕಿಯರ-ವಾಚಕಿಯರ ಸಂಘದಲ್ಲಿ ಲಕ್ಷ್ಮೀ ರಾವ್ ಆರೂರು, ರಾಧಾಬಾಯಿ, ನಾರಾಯಣ ಬಾಬು ಮತ್ತು ಶಾರದಾ ಭಟ್ ದತ್ತಿ ನಿಧಿ ಕಾರ್ಯಕ್ರಮ ಮತ್ತು ಸಾಧಕರಿಗೆ ಸಮ್ಮಾನಕಾರ್ಯಕ್ರಮ ದಿನಾಂಕ 01 ಡಿಸೆಂಬರ್ 2024 ರಂದು ನಡೆಯಿತು.
ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಮತ್ತು ಇತ್ತೀಚೆಗೆ 93ನೇ ಹುಟ್ಟುಹಬ್ಬವನ್ನಾಚರಿಸಿದ ದತ್ತಿನಿಧಿಯ ರೂವಾರಿಗಳಲ್ಲೊಬ್ಬರಾದ ಸಮಾಜ ಸೇವಕಿ ಲಕ್ಷ್ಮೀ ರಾವ್ ಆರೂರು ಮತ್ತು ಕಳೆದ ಜುಲೈ ತಿಂಗಳಲ್ಲಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿ ರಸ್ತೆಯ ಮನೆಯೊಂದರಲ್ಲಿ ನಡೆದ ಕಳ್ಳತನವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿದ ತಂಡದ ನಾಯಕಿ, ಊರ್ವ ಠಾಣೆಯ ಇನ್‌ಸ್ಪೆಕ್ಟರ್ ಭಾರತಿ ಜಿ. ಇವರನ್ನು ಸಮ್ಮಾನಿಸಲಾಯಿತು.
ದ.ಕ. ಜಿ. ಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಆನಂದ್ ಇವರು ಸಮ್ಮಾನಿತರನ್ನು ಅಭಿನಂದಿಸಿದರು. ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ರಾವ್ ಆರೂರು “ಈ ಭೂಮಿ ನಮ್ಮದಲ್ಲ. ಭೂಮಿಗೆ ಬಂದ ಮೇಲೆ ನಾವು ಭೂಮಿಯ ಋಣ ತೀರಿಸಬೇಕು.” ಎಂದರು.
ಭಾರತಿ ಜಿ. ಮಾತನಾಡಿ “ನೀವು ಮಾಡಿದ ಸಮ್ಮಾನವು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈಗಿನ ದಿನಗಳಲ್ಲಿ ಮನೆಗೆ ನುಗ್ಗುವ ಕಳ್ಳರಿಗಿಂತ ಸೈಬರ್ ಕಳ್ಳರು ಹೆಚ್ಚಾಗುತ್ತಿದ್ದಾರೆ. ಮಹಿಳೆಯರು ಈ ಬಗ್ಗೆ ಜಾಗೃತರಾಗಬೇಕು.” ಎಂದರು.
ದತ್ತಿನಿಧಿಯ ಆಶ್ರಯದಲ್ಲಿ ಸಂಘದ ಸದಸ್ಯರಿಗೆ ನಡೆದ ಲಲಿತ ಪ್ರಬಂಧ ಸ್ಪರ್ಧೆಯ ಫಲಿತಾಂಶ ಘೋಷಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಡಾ. ಕೃಷ್ಣಪ್ರಭಾ ಎಂ. ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ “ಲಲಿತ ಪ್ರಬಂಧಗಳಿಗೆ ಜೀವನದ ಪ್ರತಿ ಕ್ಷಣದ ಅನುಭವಗಳಿಗೆ ವಿಶಿಷ್ಟ ಅನುಭೂತಿಯನ್ನು ಹೊಮ್ಮಿಸಬಲ್ಲ ಶಕ್ತಿಯಿದೆ.” ಎಂದರು.
ಪ್ರಥಮ ಬಹುಮಾನ ಪಡೆದ ರೂಪಕಲಾ ಆಳ್ವ ಮತ್ತು ದ್ವಿತೀಯ ಬಹುಮಾನ ಪಡೆದ ‘ಸಹನಾ ಕಾಂತಬೈಲು ಇವರು ವಿಜೇತ ಪ್ರಬಂಧಗಳನ್ನು ಸಭೆಯಲ್ಲಿ ಓದಿದರು. ಮಂಗಳೂರು ಲೋಕಾಯುಕ್ತ ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್ ಉಪಸ್ಥಿತರಿದ್ದರು.
ರತ್ನಾವತಿ ಜೆ. ಬೈಕಾಡಿ ಆಶಯ ಗೀತೆಯನ್ನು ಪ್ರಸ್ತುತ ಪಡಿಸಿ, ಯಶೋದಾ ಮೋಹನ್ ಪ್ರಸ್ತಾವಿಕವಾಗಿ ಮಾತನಾಡಿ, ಅರುಣಾ ನಾಗರಾಜ್ ನಿರೂಪಿಸಿ, ಕೃಷ್ಣವೇಣಿ ಆರ್. ವಂದಿಸಿದರು.. ಮೋಲಿ ಮಿರಾಂಡಾ, ಶರ್ಮಿಳಾ ಶೆಟ್ಟಿ, ಸುಧಾ ನಾಗೇಶ್ ಹಾಗೂ ಅಮೃತ ಕುಮಾರಿ ಸಹಕರಿಸಿದರು.
Subscribe to Updates
Get the latest creative news from FooBar about art, design and business.
Previous Articleರಂಗಚಿನ್ನಾರಿಯಿಂದ ಗೌರವಾರ್ಪಣೆ
Related Posts
Comments are closed.