ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ನಾಡೋಜ ಡಾ. ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ದತ್ತಿ ಉಪನ್ಯಾಸ ಹಾಗೂ ರಂಗ ಗೌರವ ಸಮಾರಂಭವನ್ನು ದಿನಾಂಕ 27 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಧಾರವಾಡದ ಕ.ವಿ.ವ. ಸಂಘ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಇವರ ಅಧ್ಯಕ್ಷತೆಯಲ್ಲಿ ಧಾರವಾಡ ರಂಗಾಯಣದ ಅಧ್ಯಕ್ಷರಾದ ರಾಜು ತಾಳಿಕೋಟಿ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲಕ್ಮೇ ಕಶ್ವರ ಸ್ತ್ರೀ ಸಂಗೀತ ನಾಟಕ ಮಂಡಳಿ ಇದರ ಪರವಾಗಿ ಶ್ರೀಮತಿ ಶಾರದಮ್ಮಾ ಹೊಂಬಳ ಗದಗ ಮತ್ತು ಚಿತ್ತರಗಿ ಶ್ರೀ ಕುಮಾರ ವಿಜಯ ನಾಟ್ಯ ಸಂಘ ಇದರ ಪರವಾಗಿ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಬಾಗಲಕೋಟ ಇವರಿಗೆ ರಂಗ ಗೌರವ ನೀಡಲಾಗುವುದು. ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿ ಮಹ್ಮದಲಿ ಆರ್. ಹೊಸೂರ ಮತ್ತು ಮೈಸೂರು ಪತ್ರಕರ್ತರು ರಂಗ ವಿಮರ್ಶಕರಾದ ಗಣೇಶ ಅಮೀನಗಡ ಇವರು ಅಭಿನಂದನಾ ನುಡಿಗಳನ್ನಾಡಲಿರುವರು.